More

    ಇಂಗ್ಲೆಂಡ್‌ನ ಈ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಸಿಡಿಸಿದರೆ 5 ರನ್ ದಂಡ!

    ಲಂಡನ್: ಕ್ರಿಕೆಟ್ ಎಂದರೆ ಬಹುತೇಕ ಬ್ಯಾಟ್ಸ್‌ಮನ್‌ಗಳ ಆಟವೇ ಆಗಿದ್ದು, ಇದರಲ್ಲಿ ಸಿಕ್ಸರ್ ಸಿಡಿಸುವುದನ್ನು ನೋಡುವುದೇ ಖುಷಿ. ಅದರಲ್ಲೂ ಟಿ20, ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅಭಿಮಾನಿಗಳು ಸಿಕ್ಸರ್‌ಗಳ ಪ್ರವಾಹವನ್ನೇ ನಿರೀಕ್ಷಿಸುವ ಈ ಕಾಲದಲ್ಲಿ ಇಂಗ್ಲೆಂಡ್‌ನ ಕ್ರಿಕೆಟ್ ಮೈದಾನವೊಂದರಲ್ಲಿ ಸಿಕ್ಸರ್ ಸಿಡಿಸಿದರೆ 6 ರನ್ ನೀಡಲಾಗುವುದಿಲ್ಲ, ಅದಕ್ಕೆ ಬದಲಾಗಿ 5 ರನ್ ದಂಡ ವಿಧಿಸಲಾಗುತ್ತದೆ! ಅದಕ್ಕಿರುವ ವಿಶೇಷವಾದ ಕಾರಣವನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ.

    ಸಿಡ್‌ಮೌಂತ್ ಕ್ರಿಕೆಟ್ ಕ್ಲಬ್ ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಗಿದೆ. ಈ ಕ್ಲಬ್‌ನ ಪಂದ್ಯಗಳು ಪೋರ್ಟ್‌ಫೀಲ್ಡ್ ಟೆರೆಸ್ ಗ್ರೌಂಡ್‌ನಲ್ಲಿ ನಡೆಯುತ್ತವೆ. ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡದಲ್ಲಿರುವ ಪ್ರಮುಖ ಸ್ಪಿನ್ನರ್ ಡೊಮಿನಿಕ್ ಬೆಸ್ ಈ ಕ್ಲಬ್‌ನವರೇ ಆಗಿದ್ದಾರೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂದು ಬಾಲ್ ಬಾಯ್, ಇಂದು ಪಾಕ್ ತಂಡದ ನಾಯಕ!

    ಈ ಕ್ಲಬ್‌ನ ಮೈದಾನ ಸಮುದ್ರ ತೀರದ ಪಕ್ಕದಲ್ಲೇ ಇದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಸಿಡಿಸುವ ಚೆಂಡುಗಳು ಕೆಲವೊಮ್ಮೆ ಸಮುದ್ರ ತೀರಕ್ಕೆ ಹೋಗುತ್ತವೆ ಮತ್ತು ಅಲ್ಲಿ ವಿಹಾರಕ್ಕೆಂದು ಬಂದಿರುವ ಜನರಿಗೆ ಬಡಿದು ಗಾಯಗೊಳಿಸಿದ್ದೂ ಇದೆ. ಇದನ್ನು ತಡೆಯುವ ಸಲುವಾಗಿ ಈಗಾಗಲೆ ಮೈದಾನದ ಸುತ್ತ ಎತ್ತರಕ್ಕೆ ನೆಟ್ ಅಳವಡಿಸಲಾಗಿದೆ. ಆದರೂ ಕೆಲವೊಮ್ಮೆ ಬ್ಯಾಟ್ಸ್‌ಮನ್‌ಗಳು ಸಿಡಿಸುವ ಭರ್ಜರಿ ಸಿಕ್ಸರ್‌ಗಳು ನೆಟ್ ದಾಟಿ ಹೋಗಿ ಬೀಚ್‌ನಲ್ಲಿರುವವರಿಗೆ ಗಾಯಗೊಳಿಸುವ ಅಪಾಯ ಇದ್ದೇ ಇರುತ್ತದೆ. ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಬಗ್ಗೆ ಸುಳಿವನ್ನೇ ಹೊಂದಿರದ ಕೆಲ ಸಾರ್ವಜನಿಕರು ಸಿಕ್ಸರ್ ಸಿಡಿದ ಚೆಂಡುಗಳಿಂದ ತೊಂದರೆ ಎದುರಿಸಬೇಕಾಗುತ್ತದೆ.

    ಈ ಅಪಾಯವನ್ನು ತಪ್ಪಿಸುವ ಸಲುವಾಗಿ ಕ್ಲಬ್ ಅಧಿಕಾರಿಗಳು 2021ರ ಕ್ರಿಕೆಟ್ ಋತುವಿನಲ್ಲಿ ಬ್ಯಾಟ್ಸ್‌ಮನ್‌ಗಳು ಬೀಚ್ ಕಡೆಗೆ ಸಿಕ್ಸರ್ ಸಿಡಿಸುವುದನ್ನೇ ತಪ್ಪಿಸುವ ಸಲುವಾಗಿ 5 ರನ್ ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ. ಸೌಹಾರ್ದ ಪಂದ್ಯಗಳಿಗೆ ಮತ್ತು ಇಲ್ಲಿ ನಡೆಯುವ ಇತರ ಅಭ್ಯಾಸ ಪಂದ್ಯಗಳಿಗೆ ಈ ನಿಯಮ ಅನ್ವಯಿಸುತ್ತದೆ. ಆದರೆ ಈ ಮೈದಾನದಲ್ಲಿ ನಡೆಯುವ ಕೌಂಟಿ ಮತ್ತು ಕ್ಲಬ್ ಪಂದ್ಯಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

    ಇದನ್ನೂ ಓದಿ: ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ‘ಈ ಬಾರಿ ಕ್ರಿಕೆಟ್ ಆರಂಭಕ್ಕೆ ಮುನ್ನ ನಡೆಸಿದ ಸಭೆಯಲ್ಲಿ ನಾವು ನಮ್ಮ ಸುರಕ್ಷತಾ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಿದೆವು. ಆಗ ಆಟಗಾರರು, ಪ್ರೇಕ್ಷಕರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಕ್ಲಬ್ ಈಗಾಗಲೆ 20 ಸಾವಿರ ಪೌಂಡ್ ವ್ಯಯಿಸಿ ಬೌಂಡರಿ ಸುತ್ತಲೂ ನೆಟ್ ಅಳವಡಿಸಿದೆ. ಇದರಿಂದಾಗಿ ಚೆಂಡು ಮೈದಾನದ ಹೊರಹೋಗುವುದನ್ನು ಈಗಾಗಲೆ ಸಾಕಷ್ಟು ಯಶಸ್ವಿಯಾಗಿ ತಡೆಯಲಾಗಿದೆ. ಆದರೂ ಈಗ ಮೈದಾನದ ಅಳತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಕ್ರಮವನ್ನು ತೆಗೆದುಕೊಂಡಿದ್ದೇವೆ’ ಎಂದು ಕ್ಲಬ್ ಚೇರ್ಮನ್ ರಿಚರ್ಡ್ ಸಾಮರ್ಸ್‌ ತಿಳಿಸಿದ್ದಾರೆ.

    ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿದ ತಮಿಳುನಾಡು ತಂಡ

    ಸ್ಟೀವನ್ ಸ್ಮಿತ್ ಮಾದರಿಯಲ್ಲಿ ಜೋ ರೂಟ್ ವಿರುದ್ಧವೂ ಟೀಮ್ ಇಂಡಿಯಾ ಕಾರ್ಯತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts