More

    ಡಿಮಾನಿಟೈಸೇಷನ್ ಆಗಿ ಆರು ವರ್ಷ ಕಳೆದ್ರೂ ಹೆಚ್ಚಾಯ್ತು ಜನರ ಕೈಯಲ್ಲಿ ನಗದು!

    ನವದೆಹಲಿ: ಆರು ವರ್ಷಗಳ ಹಿಂದೆ ನಡೆದಿದ್ದ ನೋಟುಗಳ ಅಮಾನ್ಯೀಕರಣ (ಡಿಮಾನಿಟೈಸೇಷನ್​) ದೇಶದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಇದರ ಪರಿಣಾಮವಾಗಿ ಎಲ್ಲೆಲ್ಲೋ ಕೂಡಿಟ್ಟಿರುವ ನಗದು ಹೊರಬರುತ್ತದೆ, ನಗದು ಚಲಾವಣೆ ತಗ್ಗುತ್ತದೆ ಎಂದು ಅಂದಾಜಿಸಲಾಗಿತ್ತು. ಅದಾಗ್ಯೂ ಜನರಲ್ಲಿರುವ ನಗದು ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

    ಅ. 21ರ ವರೆಗಿನ ಮಾಹಿತಿ ಪ್ರಕಾರ ಜನರಲ್ಲಿರುವ ನಗದು ಪ್ರಮಾಣ ಹೆಚ್ಚಾಗಿದ್ದು, ಅದು 30.88 ಲಕ್ಷ ಕೋಟಿ ರೂಪಾಯಿ ಮೊತ್ತಕ್ಕೆ ತಲುಪಿದೆ ಎಂಬುದು ಕಂಡುಬಂದಿದೆ. ಇದು ಡಿಮಾನಿಟೈಸೇಷನ್​ ಆಗಿ ಆರು ವರ್ಷ ಕಳೆದರೂ ನಗದು ಬಳಕೆ ವ್ಯಾಪಕವಾಗಿಯೇ ಇದೆ ಎಂಬುದರ ಸೂಚಕ ಎನ್ನಲಾಗಿದೆ.

    ಏಕೆಂದರೆ ಡಿಮಾನಿಟೈಸೇಷನ್​ಗೂ ಮೊದಲು ಜನರಲ್ಲಿ ಇದ್ದುದಕ್ಕಿಂತಲೂ ಹೆಚ್ಚಿನ ನಗದು ಅದಾಗಿ ಆರು ವರ್ಷಗಳ ಬಳಿಕ ಅದು ಇನ್ನೂ ಹೆಚ್ಚಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಂಕಿ-ಅಂಶ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 2016ರ ನ. 8ಕ್ಕೆ ಡಿಮಾನಿಟೈಸೇಷನ್ ಆಗಿತ್ತು. ಆದರೆ ಅದಕ್ಕೂ ಮೊದಲು ಅಂದರೆ 2016ರ ನ. 4ರ ಅಂಕಿ-ಅಂಶಗಳ ಪ್ರಕಾರ ಜನರಲ್ಲಿದ್ದ ನಗದಿಗಿಂತಲೂ ಈಗ ಶೇ.71.84ರಷ್ಟು ಹೆಚ್ಚು ನಗದು ಈಗ ಜನರ ಬಳಿ ಇದೆ. ಆಗ ಜನರ ಬಳಿ ಇದ್ದ ನಗದು ಪ್ರಮಾಣ 17.7 ಲಕ್ಷ ಕೋಟಿ ರೂಪಾಯಿ ಎಂಬುದು ಕಂಡುಬಂದಿದೆ.

    ಜನರ ಬಳಿ ಇರುವ ನಗದು ಎಂದರೆ ಜನರು ವಹಿವಾಟು, ವ್ಯಾಪಾರ, ಖರೀದಿ, ಸೇವೆಗಾಗಿ ಬಳಸುವ ನೋಟು ಮತ್ತು ನಾಣ್ಯ. ಇದರಲ್ಲಿ ಬ್ಯಾಂಕ್​ಗಳಲ್ಲಿಇರುವ ಹಣ ಸೇರಿರುವುದಿಲ್ಲ. ಇನ್ನೊಂದೆಡೆ ಡಿಮಾನಿಟೈಸೇಷನ್ ಬಳಿಕ ಡಿಜಿಟಲ್ ವಹಿವಾಟಿನಲ್ಲಿ ಗಣನೀಯ ಹೆಚ್ಚಳ ಆಗಿದೆ ಎನ್ನಲಾಗುತ್ತಿದ್ದರೂ, ದೇಶದಲ್ಲಿ ಡಿಜಿಟಲ್ ಪಾವತಿಯ ಜಿಡಿಪಿ ಅನುಪಾತ ಸಾಂಪ್ರದಾಯಿಕವಾಗಿ ತಗ್ಗಿದೆ.

    ಡಿಮಾನಿಟೈಸೇಷನ್ ಆಗಿ ಆರು ವರ್ಷ ಕಳೆದ್ರೂ ಹೆಚ್ಚಾಯ್ತು ಜನರ ಕೈಯಲ್ಲಿ ನಗದು!

    ಪಕ್ಕದ ಮನೆಯವರಿಂದಲೇ ಕೊಲೆ?; ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವಿನ ಕುರಿತು ಮಹತ್ವದ ಸುಳಿವು

    ಸಿಎಂ ಬದಲಾವಣೆ ಆಗಿದ್ದರಿಂದಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ

    ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts