More

    6 ವರ್ಷದ ಮಗನ ಹುಡುಗಾಟ, ಅಮ್ಮನಿಗೆ ‘ತುಂಬಲಾರದ ನಷ್ಟ’!; ಐಪ್ಯಾಡ್​ ಕೊಟ್ಟ ತಾಯಿಯ ಪರಿಸ್ಥಿತಿ ಈಗ ವೆರಿ ಬ್ಯಾಡ್​!

    ನ್ಯೂಯಾರ್ಕ್​: ಮಕ್ಕಳ ಮೇಲೆ ಒಂದು ನಿಗಾ ಇರಿಸದಿದ್ದರೆ ಏನೇನಾಗಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಮಕ್ಕಳ ಕೈಗೆ ಗ್ಯಾಜೆಟ್ಸ್ ಕೊಟ್ಟು ಮೈಮರೆತರೆ ಮನೆಯ ಬಜೆಟ್ಟೇ ಏರುಪೇರಾಗುತ್ತದೆ ಎಂಬುದಕ್ಕೂ ಇದು ಅತ್ಯುತ್ತಮ ನಿದರ್ಶನ. ಏಕೆಂದರೆ ಇಲ್ಲೊಂದು ಕಡೆ ಆರು ವರ್ಷದ ಮಗನ ಹುಡುಗಾಟದಿಂದಾಗಿ ಅಮ್ಮನಿಗೆ ಈಗ ‘ತುಂಬಲಾರದ ನಷ್ಟ’ ಉಂಟಾಗಿದೆ.

    ಅಷ್ಟಕ್ಕೂ ಮಗನ ಕಿತಾಪತಿಯಿಂದಾಗಿ ಆ ತಾಯಿ ಕಳೆದುಕೊಂಡ ಹಣದ ಮೊತ್ತವನ್ನು ಕೇಳಿದರೆ ಯಾರಾದರೂ ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಏನಲ್ಲ. ಏಕೆಂದರೆ ಆರು ವರ್ಷದ ಪೋರನಿಂದಾಗಿ ತಾಯಿಗಾದ ನಷ್ಟ ಬರೋಬ್ಬರಿ 11 ಲಕ್ಷ ರೂಪಾಯಿ. ನ್ಯೂಯಾರ್ಕ್​ನಲ್ಲಿ ಆ್ಯಪಲ್ ಗ್ಯಾಜೆಟ್​ ಬಳಸುತ್ತಿರುವ ಜೆಸ್ಸಿಕಾ ಜಾನ್​ಸನ್​ ಇಂಥದ್ದೊಂದು ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ.

    ಜೆಸ್ಸಿಕಾ ಜಾನ್​ಸನ್ ಅವರ ಪುತ್ರ ಜಾರ್ಜ್​ ಜಾನ್​ಸನ್​ನ ಕೈಗೆ ಆ್ಯಪಲ್​ ಐ-ಪ್ಯಾಡ್ ಸಿಕ್ಕಿದ್ದೇ ಇಷ್ಟಕ್ಕೆಲ್ಲ ಕಾರಣ. ಐ-ಪ್ಯಾಡ್ ಮೂಲಕ ಆ್ಯಪಲ್ ಸ್ಟೋರ್​ಗೆ ಹೋದ ಬಾಲಕ ಅಲ್ಲಿ ಬರೋಬ್ಬರಿ $16000 ಅಂದರೆ 11 ಲಕ್ಷ ರೂಪಾಯಿಯಷ್ಟು ಖರೀದಿ ಮಾಡಿದ್ದಾನೆ. ಜುಲೈನಲ್ಲಿ ಈ ವಹಿವಾಟು ನಡೆದಿದ್ದು, ಆಕೆಯ ಖಾತೆಯಿಂದ ದೊಡ್ಡ ಮೊತ್ತವೇ ಕಡಿತಗೊಂಡಿದೆ. ಜುಲೈ 8ರಂದು ಆಕೆಯ ಖಾತೆಯಿಂದ ಒಟ್ಟು 25 ಸಲ $ 2,500 (ಅಂದಾಜು 1.8 ಲಕ್ಷ ರೂ.) ಕಡಿತಗೊಂಡಿತ್ತು.

    ಆರಂಭದಲ್ಲಿ ಆಕೆ ಸೈಬರ್​ ವಂಚನೆ ನಡೆದಿದೆ ಎಂದು ಭಾವಿಸಿ ದೂರು ನೀಡಿದ್ದರು. ಆದರೆ ನಂತರ ವಹಿವಾಟಿನ ಜಾಡು ಹಿಡಿದು ಹೋದಾಗ ಅದು ಆಕೆಯ ಐ-ಪ್ಯಾಡ್​ನಿಂದಲೇ ವಹಿವಾಟು ನಡೆದಿದೆ ಎಂಬುದು ಖಚಿತಪಟ್ಟಿದೆ. ಈ ಬಗ್ಗೆ ಆಕೆ ಆ್ಯಪಲ್​ ಸಂಸ್ಥೆಯ ಗಮನಕ್ಕೆ ತಂದು ಹಣ ಮರಳಿಸುವಂತೆ ಕೋರಿದ್ದಾರೆ. ಆದರೆ ವಹಿವಾಟು ನಡೆದ 60 ದಿನದೊಳಗೆ ನೀವು ನಮ್ಮ ಗಮನಕ್ಕೆ ತರಬೇಕಿತ್ತು. ಅಲ್ಲದೆ ಐ-ಪ್ಯಾಡ್​ನಲ್ಲಿರುವ ಪೇರೆಂಟಲ್ ಕಂಟ್ರೋಲ್​ ಆಪ್ಷನ್​ ಬಳಸಿಕೊಳ್ಳದೇ ಇರುವುದು ನಿಮ್ಮ ತಪ್ಪು. ಹೀಗಾಗಿ ಹಣ ಮರಳಿಸಲು ಆಗುವುದಿಲ್ಲ ಎಂದು ಸಂಸ್ಥೆ ಉತ್ತರಿಸಿದೆ. ಒಟ್ಟಿನಲ್ಲಿ ಮಗನ ಕಿತಾಪತಿಯಿಂದಾಗಿ ತಾಯಿಗೆ ಈಗ ‘ತುಂಬಲಾರದ ನಷ್ಟ’ ಉಂಟಾಗಿದೆ.
    ಮಗನ ಹುಡುಗಾಟಿಕೆಯಿಂದಾಗಿ ಈಗ ತನ್ನ ಸಾಲದ ಕಂತನ್ನೂ ಕಟ್ಟಲಾಗದ ಪರಿಸ್ಥಿತಿ ತಲುಪಿದ್ದೇನೆ. ನನಗೆ ಮಾರ್ಚ್​ನಲ್ಲಿ ಆದ ವೇತನವೇ ಕೊನೆಯದು, ಮಾತ್ರವಲ್ಲ ವೇತನದಲ್ಲೂ ಶೇ. 80 ಕಡಿತಗೊಂಡಿತ್ತು ಎಂಬುದಾಗಿ ಆಕೆ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್​)

    6 ವರ್ಷದ ಪುತ್ರನನ್ನೇ ಕತ್ತು ಹಿಸುಕಿ ಕೊಂದಳು; ಆಕೆ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts