More

  ಕೈಗಾರಿಕಾ ಅನಿಲ ಉತ್ಪಾದನಾ ಕಂಪನಿಯಲ್ಲಿ ಸ್ಫೋಟ; 6 ಮಂದಿ ಸಾವು, ಹಲವರಿಗೆ ಗಾಯ

  ವಡೋದರಾ: ಗುಜರಾತ್​ನ ವಡೋದರಾದಲ್ಲಿರುವ ವೈದ್ಯಕೀಯ ಮತ್ತು ಕೈಗಾರಿಕಾ ಅನಿಲ ಉತ್ಪಾದನಾ ಕಂಪನಿಯೊಂದರಲ್ಲಿ ಗ್ಯಾಸ್​ ಸ್ಫೋಟಗೊಂಡು ಸುಮಾರು 6 ಮಂದಿ ಮೃತಪಟ್ಟಿದ್ದಾರೆ.

  ಎಐಎಂಎಸ್​ ಇಂಡಸ್ಟ್ರಿಯಲ್​ ಪ್ರವೇಟ್​ ಲಿಮಿಟೆಡ್​​ನಲ್ಲಿ ಇಂದು ದುರ್ಘಟನೆ ನಡೆದಿದ್ದು ಸ್ಫೋಟದಲ್ಲಿ ಹಲವು ಜನರು ಗಾಯಗೊಂಡಿದ್ದಾಗಿ ವರದಿಯಾಗಿದೆ.

  ಬೆಳಗ್ಗೆ 11 ಗಂಟೆಗೆ ಅವಘಡ ಸಂಭವಿಸಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts