More

    ಸೌರ ವಿದ್ಯುತ್ ಘಟಕ ಆರಂಭಕ್ಕೆ ಸ್ಥಳ ಪರಿಶೀಲನೆ

    ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ ದಾಸೇನಹಳ್ಳಿ ಹಾಗೂ ಬಾಗೇಶಪುರ ಗ್ರಾಮದ ಸರಹದ್ದಿನಲ್ಲಿ ಸೌರ ವಿದ್ಯುತ್ ಪ್ಲಾಂಟ್ ಆರಂಭಿಸಲು ನಿರ್ಧರಿಸಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

    ಕರಿಕಲ್ ಹುಕ್ಕಡ ಬಳಿ ಈಗಾಗಲೇ ನೂರಾರು ಎಕರೆಯಲ್ಲಿ ಸೌರ ವಿದ್ಯುತ್ ಉತ್ಪಾದನಾ ಜಾಲತಾಣ ಅಳವಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಭೂಮಿ ದೊರೆತಲ್ಲಿ ದಾಸೇನಹಳ್ಳಿ ಹಾಗೂ ಬಾಗೇಶಪುರ ಗ್ರಾಮಗಳ ಆಸುಪಾಸಿನಲ್ಲಿಯೂ ಹೊಸ ಘಟಕ ಆರಂಭಿಸುವ ಕುರಿತು ವಿವರ ಸಂಗ್ರಹಿಸಿದರು.

    ಅಕ್ರಮ, ಸಕ್ರಮ ಯೋಜನೆಯಡಿ ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅಗತ್ಯವಿರುವ ಹೊಸ ಪರಿವರ್ತಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಸರ್ಕಾರದಿಂದ ಅಂದಾಜು 34 ಕೋಟಿ.ರೂ ಹಣ ಬಿಡುಗಡೆಯಾಗಿದ್ದು, ಕೆಲಸದ ಪ್ರಗತಿ ತಿಳಿಯಲು ಚಿಕ್ಕೂರು ಹಾಗೂ ಹಿರಿಯೂರು ಗ್ರಾಮಗಳಲ್ಲಿ ಸಚಿವರು ಪ್ರವಾಸ ನಡೆಸಿ ಮತ್ತಷ್ಟು ಮಾಹಿತಿ ಕಲೆಹಾಕಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಮುಖಂಡರಾದ ಮಂಗಳಾಪುರ ನಾಗರಾಜ್, ರತ್ನಕುಮಾರ್ ಹಾಗೂ ಸೆಸ್ಕ್ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts