More

    ಮಣಿಪುರ ಘಟನೆಗೆ ಪ್ರಜಾ ಪ್ರಗತಿಪರ ವೇದಿಕೆ ಖಂಡನೆ

    ಸಿರವಾರ: ಮಣಿಪುರ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ತಾಲೂಕು ಪ್ರಜಾ ಪ್ರಗತಿಪರ ವೇದಿಕೆಯಿಂದ ತಹಸೀಲ್ದಾರ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಮಣಿಪುರದಲ್ಲಿ ಕಳೆದ 2 ತಿಂಗಳಿನಿಂದ ನಿರಂತರ ಹಿಂಸಾಚಾರ ನಡೆಯುತ್ತಿದೆ. ಈ ಬಗ್ಗೆ 78 ದಿನಗಳ ಬಳಿಕ ದೇಶದ ಪ್ರಧಾನಿ ಖಂಡನೆ ವ್ಯಕ್ತಪಡಿಸಿ ಸುಮ್ಮನಾಗಿದ್ದು, ಈವರೆಗೆ ಮಣಿಪುರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿಲ್ಲವೆಂದು ದೂರಿದರು.

    ಅಲ್ಲಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಘಟನೆಯಲ್ಲಿ 142 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 310 ಜನರಿಗೆ ಗಾಯಗಳಾಗಿದ್ದು, 80 ಸಾವಿರಕ್ಕೂ ಹೆಚ್ಚಿನವರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಷ್ಟಾದರೂ ಯಾವೊಬ್ಬ ಕೇಂದ್ರ ಸಚಿವರು ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪ್ರಯತ್ನ ಮಾಡಿಲ್ಲ. ಈ ಎಲ್ಲ ಘಟನೆಗಳಿಗೆ ಕೇಂದ್ರ ಸರ್ಕಾರದ ಬೇಜವಾಬ್ದಾರಿ ನೀತಿಗಳೇ ಕಾರಣ ಎಂದು ಆರೋಪಿಸಿದರು.

    ಇದನ್ನೂ ಓದಿ: ಮಣಿಪುರ ವೈರಲ್ ವಿಡಿಯೋ ಪ್ರಕರಣ: 14 ಜನರನ್ನು ಗುರುತಿಸಿದ ಪೊಲೀಸರು

    ಘಟನೆಯ ತನಿಖೆಯನ್ನು ನಿಷ್ಪಕ್ಷವಾಗಿ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸಿ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕಿನ ಪ್ರಗತಿಪರರು ಹಾಗೂ ಸನಾಮ ಮನಸ್ಕರು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ್ ಫಕೃದ್ದೀನ್‌ಗೆ ಸಲ್ಲಿಸಿದರು.

    ಪ್ರಗತಿಪರ ಸಂಘಟನೆ ಪದಾಧಿಕಾರಿಗಳಾದ ಬಸವರಾಜ ಭಂಡಾರಿ, ಅಬ್ರಾಹಂ ಹೊನ್ನಟಗಿ, ಕುಮಾರ್ ಭಜಂತ್ರಿ, ಡಿ. ಭೀಮಣ್ಣ , ಖಾಜನಗೌಡ, ಚನ್ನಪ್ಪ ಬೂದಿನಾಳ, ಮೇಶಾಕ್ ದೊಡ್ಮನೆ, ಚಂದ್ರಶೇಖರ್ ಗೌಡ ಯಲ್ಲೇರಿ, ಹನುಮೇಶ, ಮೌನೇಶ ಮರಾಠ, ನಾಗರಾಜ ಬೊಮ್ಮನಾಳ, ಜಯರಾಜ್, ಹುಲಿಗೆಪ್ಪ ಮಡಿವಾಳ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts