ಸಿರಗುಪ್ಪ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಮಸಣ ಕಾರ್ಮಿಕರ ಸಂಘ ತಹಸೀಲ್ದಾರ್ ಎಸ್.ಬಿ.ಕೂಡಲಗಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಚ.ಭೀಮಪ್ಪ ಮಾತನಾಡಿ, ಮಸಣ ಕಾರ್ಮಿಕರು ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷತಾ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಬೇಕು ಹಾಗೂ ಉದ್ಯೋಗ ಖಾತ್ರಿಯಲ್ಲಿ ಕನಿಷ್ಠ 200 ದಿನಗಳ ಕಾಲ ಉದ್ಯೋಗ ನೀಡಬೇಕು. ಕುಟುಂಬದ ಸದಸ್ಯರಿಗೆ ಹೈನುಗಾರಿಕೆಯಂತಹ ಇತರ ಉದ್ಯೋಗಕ್ಕಾಗಿ ಶೇ.75 ಸಹಾಯಧನ ನೀಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭಾಸಕ್ಕಾಗಿ ವಸತಿ ಶಾಲೆಗಳಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯರಾದ ಸಿ.ರಾಮಚಂದ್ರ, ಸಿ.ಮುತ್ತಣ್ಣ, ಲೋಹಿತ್, ಯಲ್ಲಪ್ಪ, ಶೇಕಣ್ಣ, ನಾಗಪ್ಪ, ಮುಖಂಡರಾದ ಎಚ್.ಬಿ.ಓಬಳೇಶ್ವರಪ್ಪ, ಎಂ.ಲಕ್ಷ್ಮಣ, ಕೆ.ಅಂಜಿನಪ್ಪ, ಬಿ.ಎಲ್.ಈರಣ್ಣ, ವಿ.ಮಾರುತಿ ಇದ್ದರು.