More

  ಸಿರಗುಪ್ಪದಲ್ಲಿ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥರಿಂದ ಸಂಸ್ಥಾನ ಪೂಜೆ

  ಸಿರಗುಪ್ಪ: ನಗರದ ಶ್ರೀನಿವಾಸ ಆಂಜನೇಯ, ಶನೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಪಂಚವಿಶಾಂತಿ, ಕಳಶಾಭಿಷೇಕ, ಹೋಮ, ಪೂರ್ಣಾಹುತಿ ಹಾಗೂ ದೇವರಿಗೆ ಅಭಿಷೇಕ, ಮಹಾಮಂಗಳಾರತಿ ನಡೆಯಿತು.

  ಉಡುಪಿಯ ಶ್ರೀಮನ್ ಮಧ್ವಾಚಾರ್ಯ ಮಹಾಸಂಸ್ಥಾನ ಬನ್ನಂಜೆ ಮಠದ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥರು, ಸಂಸ್ಥಾನ ಪೂಜೆಯಲ್ಲಿ ವಿಠಲ, ರಾಮವಿಠಲ, ಶ್ರೀನಿವಾಸ, ಶ್ರೀಕೃಷ್ಣ ಮೂರ್ತಿಗಳಿಗೆ ಮತ್ತು ಜನಾರ್ದನ ಸಾಲಿಗ್ರಾಮಗಳಿಗೆ ಪೂಜೆ ಸಲ್ಲಿಸಿದರು.

  ನಂತರ ಮಾತನಾಡಿದ ಅವರು, ಭಕ್ತರು ಕೇವಲ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ, ಅಭಿಷೇಕ, ಪೂಜೆ ಸಲ್ಲಿಸಿದರೆ ಅದು ದೇವರಿಗೆ ಮುಟ್ಟುವುದಿಲ್ಲ. ಲೌಕಿಕ, ಅಲೌಕಿಕ ಕೆಲಸಗಳನ್ನು ಭಗವಂತನಿಗೆ ಅರ್ಪಿಸಿ ಕಷ್ಟದಲ್ಲಿರುವ, ದುರ್ಬಲರಿಗೆ ಕೈಲಾದಷ್ಟು ಸಹಾಯ ಮಾಡಿದರೆ ಅದು ಭಗವಂತನಿಗೆ ಸಂತೃಪ್ತಿ ನೀಡುತ್ತದೆ. ಮಾಡುವ ಕೆಲಸಗಳು ಪ್ರಾಮಾಣಿಕವಾಗಿದ್ದರೆ ಭಗವಂತನು ಪ್ರೇರಣಾ ಶಕ್ತಿಯಾಗಿ ಯಶಸ್ಸನ್ನು ತಂದು ಕೊಡುತ್ತಾನೆ ಎಂದರು. ಅರ್ಚಕ ವೆಂಕಟೇಶ ಆಚಾರ್ಯ, ಮುಖಂಡರಾದ ಎಸ್.ಷಣ್ಮುಖ, ಪಿ.ಮಲ್ಲಿಕಾರ್ಜುನ, ಕೊಸಗಿ ನಾಗರಾಜಶೆಟ್ಟಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts