More

    ಸಾಗುವಳಿ ರೈತರಿಗೆ ಪಟ್ಟಾ ನೀಡಲು ಪ್ರಾಂತ ರೈತ ಸಂಘ ಆಗ್ರಹ; ಸಿರಗುಪ್ಪ, ಹಬೊಹಳ್ಳಿಯಲ್ಲಿ ಪ್ರತಿಭಟನೆ

    ಸಿರಗುಪ್ಪ/ಹಗರಿಬೊಮ್ಮನಹಳ್ಳಿ: ಬಗರ್ ಹುಕುಂ ಸಮಿತಿ ರಚನೆ ಜತೆಗೆ ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಸಿರಗುಪ್ಪ ಹಾಗೂ ಹಬೊಹಳ್ಳಿಯಲ್ಲಿ ಪ್ರಾಂತ ರೈತ ಸಂಘ ಹಾಗೂ ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ ನಡೆಸಿದವು.

    ಹಲವು ವರ್ಷಗಳಿಂದ ರೈತರು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಜೀವನ ನಡೆಸುತ್ತಿದ್ದು, ಹಕ್ಕುಪತ್ರ ನೀಡಬೇಕು. ಫಾರ್ಮ್ ನಂ.53 ಅರ್ಜಿ ಸಲ್ಲಿಸಲು ಕಾಲಾವಕಾಶ ಕೊಡಬೇಕು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಕು. ಕಾಳಸಂತೆಯಲ್ಲಿ ರಾಸಾಯನಿಕ ಗೊಬ್ಬರಗಳ ಮಾರಾಟ ತಡೆಯಬೇಕು. ಅತಿವೃಷ್ಟಿ ಪರಿಹಾರ ಘೋಷಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಸಿರಗುಪ್ಪದಲ್ಲಿ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮಾರುತಿ, ಪದಾಧಿಕಾರಿಗಳಾದ ಎಲ್.ಹುಸೇನಪ್ಪ, ಎಚ್.ತಿಪ್ಪಯ್ಯ, ವೀರೇಶ, ಹುಲೆಪ್ಪ, ಅಂಬಣ್ಣ, ಮಾರೇಶ, ಯಲ್ಲಪ್ಪ, ಹಂಸಪ್ಪ, ಭೀಮಣ್ಣ, ಈರಮ್ಮ, ಸರ್ದಾರಪ್ಪ ಇದ್ದರು.

    ಹಗರಿಬೊಮ್ಮನಹಳ್ಳಿಯಲ್ಲಿ ದಲಿತ ಹಕ್ಕುಗಳ ಸಮಿತಿ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿದರು. ಸಂಘಟನೆ ಸಹಸಂಚಾಲಕ ದೊಡ್ಡಬಸವರಾಜ, ಸಿಪಿಐಎಂ ಕಾರ್ಯದರ್ಶಿ ಎಸ್.ಜಗನ್ನಾಥ, ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ.ಗಾಳೆಪ್ಪ, ಕಾರ್ಯದರ್ಶಿ ಎಚ್.ಮಂಜುನಾಥ, ಸಂಚಾಲಕರಾದ ಆನಂದ, ಹುಲುಗಪ್ಪ, ಪರಶುರಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts