More

    ರೈತರಿಗೆ ಸೂಕ್ತ ಮಾಹಿತಿ ನೀಡಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಸೂಚಿಸಿದ ಶಾಸಕ ಎಂ.ಎಸ್. ಸೋಮಲಿಂಗಪ್ಪ

    ಸಿರಗುಪ್ಪ: ರೈತರು ಕೃಷಿ ಅಧಿಕಾರಿಗಳಿಗಿಂತ ರಸಗೊಬ್ಬರ ಮಾರಾಟಗಾರರ ಸಲಹೆ ಸೂಚನೆಗಳನ್ನೇ ಹೆಚ್ಚಾಗಿ ಪಾಲಿಸುತ್ತಾರೆ. ಹೀಗಾಗಿ ಮಾರಾಟಗಾರರು ಡಿಪ್ಲೊಮಾ ತರಗತಿಯಲ್ಲಿ ನೀಡುವ ಮಾಹಿತಿಯನ್ನು ರೈತರಿಗೆ ನೀಡಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕೆಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.

    ನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ರಾಯಚೂರು, ಬಳ್ಳಾರಿ ಕೃಷಿ ತಂತ್ರಜ್ಞಾನ ಸಂಸ್ಥೆ, ತಾಲೂಕು ಕೃಷಿ ಇಲಾಖೆ ಸಹೋಗದಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಸೋಮವಾರ ಏರ್ಪಡಿಸಿದ್ದ 2020-21ನೇ ಸಾಲಿನ ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

    ರಸಗೊಬ್ಬರ ಅಂಗಡಿ ಮಾಲೀಕರು, ರೈತರಿಗೆ ಆರ್ಥಿಕ ಹೊರಯಾಗದಂತೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ನೀಡಿ, ಬೆಳೆ ನಿರ್ವಹಣೆ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಗೋಪಾಲ್ ಮಾತನಾಡಿ, ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೊಮಾ ತರಬೇತಿಯು 2003ರಿಂದ ಪ್ರಾರಂಭವಾಗಿದ್ದು, ದೇಶದಲ್ಲಿ ಈವರೆಗೆ 2 ಲಕ್ಷಕ್ಕೂ ಅಧಿಕ ಕೃಷಿ ಪರಿಕರಗಳ ಮಾರಾಟಗಾರರು ತರಬೇತಿ ಪಡೆದಿದ್ದಾರೆ. 48 ವಾರಗಳ ತರಬೇತಿಯಲ್ಲಿ ರೈತರಿಗೆ ಬೇಕಿರುವ ಸಂಪೂರ್ಣ ಮಾಹಿತಿಯನ್ನು ಕೃಷಿ ಪರಿಕರಗಳ ಮಾರಾಟಗಾರರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲಾ ಜಂಟಿ ಕೃಷಿ ನಿದೇರ್ಶಕ ಡಾ.ಕೆ. ಮಲ್ಲಿಕಾರ್ಜುನ, ಜಿಲ್ಲಾ ಉಪ ಕೃಷಿ ನಿದೇರ್ಶಕ ಸಿ.ಆರ್. ಚಂದ್ರಶೇಖರ್, ನಗರದ ಕೃಷಿ ಸಂಶೋಧನಾ ಕೇಂದ್ರದ ಪ್ರಧ್ಯಾಪಕ, ಮುಖ್ಯಸ್ಥ ಡಾ.ಎಂ.ಎ. ಬಸವಣ್ಣೆಪ್ಪ, ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಎನ್. ನಜೀರ್ ಅಹಮ್ಮದ್, ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ವಿ.ಕೆ. ಕಮತರ್, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾ. ಅಧ್ಯಕ್ಷ ಕೆ.ನಾಗನಗೌಡ ಹಾಗೂ ಡಿಪ್ಲೊಮಾ ತರಬೇತಿ ಪಡೆದ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts