More

    ಶಿರಸಿ ಜಾತ್ರೆಗೆ ಜನರೋ ಜನ

    ಶಿರಸಿ: ಭಾನುವಾರ ಲಕ್ಷಾಂತರ ಭಕ್ತರು ಜಾತ್ರಾ ಗದ್ದುಗೆಯಲ್ಲಿ ಆಸೀನಳಾದ ತಾಯಿ ಮಾರಿಕಾಂಬೆಯ ದರ್ಶನ ಪಡೆದುಕೊಂಡರು.
    ಬೆಳಗ್ಗೆ 5 ಗಂಟೆಯಿಂದಲೇ ದೇವಿಯ ದರ್ಶನಕ್ಕಾಗಿ ಸರತಿ ಸಾಲು ಆರಂಭಗೊAಡಿತ್ತು. ಬಿಸಿಲಿನ ಝಳವನ್ನೂ ಲೆಕ್ಕಿಸದೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಾರಿಕಾಂಬಾ ದೇವಾಲಯದ ವತಿಯಿಂದ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತಾದರೂ ಸರತಿ ಸಾಲು ಅದನ್ನೂ ಮೀರಿ ಮಕಿ ದುರ್ಗಿ ದೇವಾಲಯದವರೆಗೂ ಬೆಳೆದಿತ್ತು. ಜಾತ್ರಾ ಗದ್ದುಗೆಯ ಪ್ರವೇಶ ದ್ವಾರಗಳಲ್ಲಿ ಜನ ಜಂಗುಳಿ ಅಧಿಕವಾಗಿ ಭಕ್ತರು ಸಂಚರಿಸುವುದೂ ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು.

    ಗಣ್ಯರಿಂದ ದೇವಿ ದರ್ಶನ
    ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದ ಬೊಧೇಂದ್ರ ಸರಸ್ವತೀ ಸ್ವಾಮೀಜಿ, ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆನರಾ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಶಾಸಕ ಭೀಮಣ್ಣ ನಾಯ್ಕ ಹಾಗೂ ಅನೇಕ ಗಣ್ಯರು ಮಾರಿಕಾಂಬೆಯ ದರ್ಶನ ಪಡೆದರು.


    ಟ್ರಾಫಿಕ್ ಜಾಂ…ಜಾಂ
    ಶನಿವಾರ ಸಂಜೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣಿ, ಟ್ರಾಫಿಕ್ ಜಾಂ ಆರಂಭಗೊಂಡಿದೆ. ಶಿರಸಿ ಕುಮಟಾ ರಸ್ತೆಯಲ್ಲಿ ನೀಲೇಕಣಿಯವರೆಗೂ ವಾಹನಗಳು ಸಾಲಾಗಿ ನಿಂತಿದ್ದರೆ, ಇತ್ತ ಯಲ್ಲಾಪುರ ರಸ್ತೆಯಲ್ಲಿಯೂ ಅದೇ ಸ್ಥಿತಿ ಇತ್ತು. ಈ ಪರಿಸ್ಥಿತಿ ಭಾನುವಾರ ಸಂಪೂರ್ಣ ದಿನ ನಗರದಲ್ಲಿತ್ತು. ಮುಖ್ಯ ವೃತ್ತವಾದ ಐದು ರಸ್ತೆ ಬಳಿ ವಾಹನಗಳ ಟ್ರಾಫಿಕ್ ಜಾಂ ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

    ಇದನ್ನೂ ಓದಿ: ಬೋನಿಗೆ ಬಿದ್ದ ಆತಂಕ ಹುಟ್ಟಿಸಿದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts