More

    ನೆಮ್ಮದಿ ಬಾಳಿಗೆ ಪುರಾಣ-ಪ್ರವಚನ ಕೇಳಿ, ದ್ವಾರುಕಾಶ್ರಮದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಲಹೆ

    ಸಿರಿಗೇರಿ: ಜೀವನದಲ್ಲಿ ಕಷ್ಟಕಾರ್ಪಣ್ಯಗಳು ಸಹಜ. ಅವುಗಳನ್ನು ಸಾವಧಾನದಿಂದ ಎದುರಿಸಿ ನಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಶಾನವಾಸಪುರದ ದ್ವಾರುಕಾಶ್ರಮದ ಷ.ಬ್ರಹ್ಮ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನ ಆವರಣದ ಜಗದ್ಗುರು ಮರುಳ ಸಿದ್ದೇಶ್ವರ ವೇದಿಕೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ 15 ದಿನಗಳ ಕಲಬುರಗಿ ಶರಣ ಬಸವೇಶ್ವರ ಪುರಾಣ ಪ್ರವಚನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ಪುರಾಣಗಳ ಮೂಲಕ ಪೌರಾಣಿಕ ವಿಷಯಗಳನ್ನು ಅರಿತು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

    ಶ್ರಾವಣ ಮಾಸದಲ್ಲಿ ದೇವರ ಆರಾಧನೆ ಜತೆಗೆ ಶರಣರ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು, ತಾಯಂದಿರು ನಿತ್ಯ ಪುರಾಣ ಪ್ರವಚನಗಳನ್ನು ಕೇಳಿ ದು:ಖ ದುಮ್ಮಾನಗಳನ್ನು ಮರೆತು ಕುಟುಂಬದ ಜತೆ ಸಂತೋಷದ ದಿನಗಳನ್ನು ಕಳೆಯಬೇಕು ಎಂದರು.

    ನಾಗನಾಥೇಶ್ವರ ದೇವಸ್ಥಾನ ಮಂಡಳಿ ಅಧ್ಯಕ್ಷ ಬಿ. ಮಹಾರುದ್ರಗೌಡ ಮಾತನಾಡಿ, ಪುಣ್ಯ ಕ್ಷೇತ್ರಗಳಲ್ಲಿ ಪುರಾಣವನ್ನು ಆಲಿಸುವುದೇ ಪುಣ್ಯದ ಕೆಲಸ. ಇಂತಹ ಸಂದರ್ಭಗಳನ್ನು ಭಕ್ತರು ಕಳೆದುಕೊಳ್ಳಬಾರದು ಎಂದರು.

    ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ವೇದಮೂರ್ತಿ ಮಂಜುನಾಥ ಶಾಸ್ತ್ರಿಗಳು ಪುರಾಣ ಪ್ರವಚನ ಮಾಡಿದರು. ಇದಕ್ಕೆ ಸಂಗೀತ ವಾಚಕ ಚಂದ್ರಶೇಖರ್ ಅಳ್ಳದ ಗವಾಯಿ, ತಬಲ ವಾದಕ ಶಾಂತವೀರಯ್ಯ ಆರ್.ಹಿರೇಮಠ ಸಾಥ್ ನೀಡಿದರು.

    ಪ್ರಮುಖರಾದ ಬಿ.ಅಂಬರೇಶ್ ಗೌಡ, ಅಡಿವೆಯ್ಯ ಸ್ವಾಮಿ, ಪೂಜಾರಿ ಸಿದ್ದಯ್ಯ, ಬಕಾಡೆ ಈರಯ್ಯ, ಆರ್.ನಾಗರಾಜ್ ಗೌಡ, ಶಂಕ್ರಪ್ಪ, ಆನಂದಗೌಡ, ಗೋಡೆ ಶೇಖರಪ್ಪ, ಗೋಡೆ ಭೀಮಗೌಡ, ಬಸವರಾಜ ಸ್ವಾಮಿ, ಚನ್ನಬಸಯ್ಯ ಸ್ವಾಮಿ, ತಂಬೂರಿ ಶರಣ ಬಸವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts