More

    ಉತ್ತಮ ಕಲಾವಿದರನ್ನು ಹೊಂದಿದೆ ಸಿರಿಗೇರಿ; ಶಾಸಕ ಎಂ.ಎಸ್.ಸೋಮಲಿಂಗಪ್ಪ ಬಣ್ಣನೆ

    ಧಾತ್ರಿರಂಗ ಸಂಸ್ಥೆ ವಾರ್ಷಿಕೋತ್ಸವ

    ಸಿರಿಗೇರಿ: ಜನಮಾನಸದಲ್ಲಿ ಉಳಿಯುವಂಥ ಸಾಧನೆ ಮಾಡಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

    ಕೇಂದ್ರೀಯ ಸಾಂಸ್ಕೃತಿಕ ಸಚಿವಾಲಯ ಸಹಯೋಗದೊಂದಿಗೆ ಎಂಟನೇ ವರ್ಷದ ಧಾತ್ರಿರಂಗ ಸಂಸ್ಥೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿರಿಗೇರಿಯ ಉತ್ತಮ ಕಲಾವಿದರನ್ನು ಹೊಂದಿದ ಗ್ರಾಮವಾಗಿದೆ. ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ ತೀರ್ಮಾನಿದ್ದು, 9.80 ಕೋಟಿ ರೂ. ದೊರೆಯಲಿದೆ ಎಂದರು.

    ಸಂಸ್ಥೆಯ ಕಾರ್ಯದರ್ಶಿ ಕಲಾವಿದ ವೈ.ಮಂಜುನಾಥ್ ಮಾತನಾಡಿ, ಸಂಸ್ಥೆಯನ್ನು ಪ್ರಾರಂಭದಲ್ಲಿ ಕಷ್ಟಪಟ್ಟು ಕಟ್ಟಿದ್ದೇವೆ. ಕಲಾವಿದರನ್ನು ಹುಡುಕಿ ಅವರಿಗೆ ನಾಟಕ, ಬಯಲಾಟದಂತಹ ತರಬೇತಿ ನೀಡಿದ್ದೇವೆ. ಸಂಸ್ಥೆಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಸಾಗುತ್ತಾ ಬಂದಿದ್ದೇವೆ. ಗ್ರಾಮದ ಮುಖಂಡರು ಸಹಕರಿಸಿದ್ದಾರೆ. ಸದ್ಯಕ್ಕೆ ಕಲಾವಿದರಿಗೆ ನಾಟಕ, ಬಯಲಾಟಗಳಿಗೆ ತಾಲೀಮು ಮಾಡಲು ಸ್ಥಳದ ಅವಶ್ಯಕತೆ ಇರುತ್ತದೆ. ಅಧಿಕಾರಿಗಳು ಒಗಿಸಿಕೊಟ್ಟರೆ ಕಲಾವಿದರಿಗೆ ಆಶ್ರಯ ನೀಡಿದಂತಾಗುತ್ತದೆ ಎಂದರು.

    ನಂತರ ‘ಸೀತಾಪಹರಣ’ ಬಯಲಾಟ ಪ್ರದರ್ಶನಕೊಂಡಿತು. ತಹಸೀಲ್ದಾರ್ ಎನ್.ಆರ್.ಮಂಜುನಾಥ್ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಪೂಜಾರಿ ಲಕ್ಷ್ಮಮ್ಮ ಕರಿಯಪ್ಪ, ಉಪಾಧ್ಯಕ್ಷ ಭಜಂತ್ರಿ ರಮೇಶ್, ಜಿಲ್ಲಾ ಹಾಪ್‌ಕಾಮ್ಸ್‌ನ ಉಪಾಧ್ಯಕ್ಷ ಹಾಗಲೂರು ಮಲ್ಲನಗೌಡ, ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ, ಎಎಸ್‌ಐ ಗಂಗಣ್ಣ, ಪ್ರಾಕೃಪ ಅಧ್ಯಕ್ಷ ಉಮಾಪತಿ, ಬಯಲಾಟ ಅಕಾಡೆಮಿ ಸದಸ್ಯ ಎಚ್.ತಿಪ್ಪೇಸ್ವಾಮಿ, ಕಸಾಪದ ತಾಲೂಕು ಮಾಜಿ ಅಧ್ಯಕ್ಷ ಎಸ್.ಎಂ.ನಾಗರಾಜ್ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts