More

    ತರಳಬಾಳು ಹುಣ್ಣಿಮೆಗೆ ದಿನಗಣನೆ

    ಸಿರಿಗೆರೆ: ತರಳಬಾಳು ಬೃಹನ್ಮಠವು ಕಳೆದ 69 ವರ್ಷಗಳಿಂದ ನಾಡಿನ ಒಳ-ಹೊರಗೆ ನಡೆಸಿಕೊಂಡು ಬಂದಿರುವ, ಸರ್ವ ಧರ್ಮಿಯರನ್ನೂ ಸದ್ಥರ್ಮದ ಬೆಸುಗೆಯಲ್ಲಿ ಒಗ್ಗೂಡಿಸಿ ಭಾವೈಕ್ಯದ ಬೀಜ ಬಿತ್ತುವ ತರಳಬಾಳು ಹುಣ್ಣಿಮೆ ಮಹೋತ್ಸವ ಈ ಬಾರಿ ಹಳೇಬೀಡಿನಲ್ಲಿ ನಡೆಯಲಿದೆ.

    ಹಿನ್ನೆಲೆ: ಬಸವಾದಿ ಶಿವಶರಣರ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ದರು ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯಿಂದ ರಕ್ಷಿಸಲು ಅಜೀವಪರ್ಯಂತ ಹೋರಾಡಿದರು. ನವ ಸಮಾಜ ನಿರ್ಮಾಣಕ್ಕಾಗಿ ಸದ್ಥರ್ಮ ಪೀಠ ಸ್ಥಾಪಿಸಿದರು.

    ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗುಬಾಳು ಸಿದ್ದನನ್ನು ಸದ್ಧರ್ಮ ಪೀಠದಲ್ಲಿ ಕುಳ್ಳಿರಿಸಿ ತರಳಾ ಬಾಳು ಎಂದು ಹರಸಿದರು. ತರಳಾ, ಬಾಳು ಎಂಬ ಪಂಚಾಕ್ಷರಿ ಮಂತ್ರದಲ್ಲಿ ಮನುಕುಲದ ಅಭ್ಯುದಯ ಅಡಕವಾಗಿದೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿ ಬಂದ ಸದ್ಧರ್ಮ ಪೀಠಾಧಿಪತಿಗಳೇ ತರಳಬಾಳು ಜಗದ್ಗುರುಗಳಾಗಿ ಹೆಸರಾಗಿದ್ದಾರೆ. ಈ ಐತಿಹಾಸಿಕ ಹಿನ್ನೆಲೆಯಿಂದಲೇ ತರಳಬಾಳು ಹುಣ್ಣಿಮೆ ಇಂದು ನಾಡಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ.

    ಶ್ರೀಗಳು ಸಾಗುವ ಮಾರ್ಗ: ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆಯಿಂದ ಹಳೇಬೀಡಿಗೆ ಹೊರಡುವ ಮುನ್ನ ಇಲ್ಲಿನ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಗೌರವ ಸಮರ್ಪಿಸಿ, ಬಳಿಕ ಧ್ವಜಾರೋಹಣ ನೆರವೇರಿಸಿ ಫೆ.1 ಬೆಳಗ್ಗೆ 10ಕ್ಕೆ ಗ್ರಾಮದಿಂದ ಹೊರಟು ಜಮ್ಮೇನಹಳ್ಳಿ, ಸಿದ್ದಾಪುರ, ಡಿ.ಮೆದಕೇರಿಪುರ, ಮುತ್ತಗದೂರು, ಕೂಟಗೇಹಳ್ಳಿ, ಅಬ್ಬೆಗೆರೆ, ಅಂತಾಪುರ ಗೇಟ್, ಅಗರಿಬನ್ನಿಹಟ್ಟಿ, ಚನ್ನಗಿರಿ, ಮರವಂಜಿ, ನಲ್ಲಿಹಕ್ಲು ಗೇಟ್, ಢಣಾಯಕಪುರ, ಅತ್ತಿಮೊಗ್ಗೆ, ಬೀರೂರು, ಕಡೂರು, ಚಟ್ನಳ್ಳಿ, ಜಾವಗಲ್ ಮೂಲಕ ಸಾಗಿ ಅಂದು ಸಂಜೆ 5.30ಕ್ಕೆ ಹಳೇಬೀಡು ತಲುಪುವರು.

    ಫ್ಲೆಕ್ಸ್ ಬಳಕೆ ನಿಷೇಧ: ಶ್ರೀಗಳು ಸಾಗುವ ಮಾರ್ಗದಲ್ಲಿ ಭಕ್ತರು ಫ್ಲೆಕ್ಸ್-ಬ್ಯಾನರ್ ಹಾಕದೆ ತಳಿರು ತೋರಣಗಳಿಂದ ಊರಿನ ಮುಖ್ಯದ್ವಾರವನ್ನು ಅಲಂಕರಿಸಿ ಪೂಜ್ಯರನ್ನು ಸ್ವಾಗತಿಸಿ ಬೀಳ್ಕೊಡಬೇಕಾಗಿ ತರಳಬಾಳು ಹುಣ್ಣಿಮೆ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts