More

    ಕಾನೂನುಗಳ ಅರಿವು ಹೆಣ್ಣಿಗೆ ಇರಲಿ

    ಸಿರಿಗೆರೆ: ಸಮಾನ ಕೆಲಸಕ್ಕೆ ಸಮಾನ ವೇತನ, ಸಮಪಾಲು, ಸಮಬಾಳು ಎಂಬುದನ್ನು ಕಾನೂನುಗಳು ಪ್ರತಿಪಾದಿಸುತ್ತವೆ. ಇವುಗಳ ಕುರಿತು ಅರಿವು ಇರಬೇಕು ಎಂದು ಚಿತ್ರದುರ್ಗದ ವಕೀಲೆ ಡಿ.ಬಿ.ಸೌಮ್ಯಾ ತಿಳಿಸಿದರು.

    ಸಮುದಾಯ ಸಂಪನ್ಮೂಲ ಕೇಂದ್ರದಿಂದ ಗ್ರಾಮದ ನಾರದಮುನಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಪೋಕ್ಸೋ ಕಾಯ್ದೆಯು ಮಹಿಳಾ ದೌರ್ಜನ್ಯ ತಡೆಗೆ ಸಹಾಯಕವಾಗಿದೆ. 122ನೇ ವಿಧಿ ಪ್ರಕಾರ ವಿಚ್ಛೇದಿತ ಪತಿಯಿಂದ ಮಹಿಳೆ ಜೀವನಾಂಶ ಪಡೆಯುವ ಹಕ್ಕನ್ನು ನೀಡಿದೆ. ಅವರ ಸುರಕ್ಷತೆಗಾಗಿ ನಿರ್ಭಯಾ ಆ್ಯಪ್ ರೂಪಿಸಲಾಗಿದೆ ಎಂದರು.

    ಚಿತ್ರದುರ್ಗ ಎಸ್‌ಜೆಎಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಮನಾ ಎಸ್.ಅಂಗಡಿ ಮಾತನಾಡಿ, ಮಹಿಳೆ ಎಂದರೆ ಸೌಂದರ್ಯ, ಶಕ್ತಿ, ಸ್ಫೂರ್ತಿಯ ಪ್ರತೀಕ. ಆಕೆ ಪ್ರತಿ ಹಂತದಲ್ಲೂ ಆಶ್ರಯದಲ್ಲಿ ಬೆಳೆದರೂ ಸ್ವಾವಲಂಬಿಯಾಗಿ ಬದುಕಬೇಕಿದೆ ಎಂದು ತಿಳಿಸಿದರು.

    ಆಟೋಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಶ್ವಿನಿ ಶಂಕರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts