More

    ಅವಶ್ಯ ಸೌಲಭ್ಯಗಳಿಗೆ ಪರಿಹಾರ

    ಸಿರವಾರ: ಗ್ರಾಮೀಣ ಜನರು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆಯುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸುವುದಕ್ಕಾಗಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

    ಕಲ್ಲೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಶನಿವಾರ ಮಾತನಾಡಿದರು. ಜನರಿಗೆ ಅವಶ್ಯ ಸೌಲಭ್ಯಗಳು ಅವರ ಸ್ಥಳದಲ್ಲಿಯೇ ಸಿಗಬೇಕು ಎಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

    ವೃದ್ಧರು, ಅಂಗವಿಕಲರು, ವಿಧವೆಯರು, ದುರ್ಬಲರಿಗೆ ಈ ಕಾರ್ಯಕ್ರಮದಿಂದ ಹಲವು ಯೋಜನೆಗಳ ಲಾಭ ಸಿಗಲಿದೆ. ಪ್ರತಿಯೊಂದು ಕುಟುಂಬದವರು ಆರೋಗ್ಯ ಕಾರ್ಡ್, ನರೇಗಾ ಗುರುತಿನ ಚೀಟಿ, ಕಟ್ಟಡ ಕಾರ್ಮಿಕ ಕಾರ್ಡ್ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ರೈತರು ಹೊಲದಲ್ಲಿ ಹಾವು ಕಚ್ಚಿ ಮೃತಪಟ್ಟರೆ ಕುಟುಂಬದವರಿಗೆ ಸರ್ಕಾರದಿಂದ 2ಲಕ್ಷ ರೂ. ಮತ್ತು ಸಿಡಿಲು ಬಡಿದು ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗೆ ಲಿಖಿತ ರೂಪದಲ್ಲಿ ನೀಡಿದರೆ ತಕ್ಷಣದಲ್ಲಿ ಪರಿಹಾರ ನೀಡಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು. ಎಎಸ್‌ಐ ಯಂಕಣ್ಣ ಗೌಡ, ಕೃಷಿ ಇಲಾಖೆ ಅಧಿಕಾರಿ ರಶ್ಮಿ, ಕಂದಾಯ ನಿರೀಕ್ಷಕರಾದ ಶ್ರೀನಾಥ, ರವಿಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts