More

    ವಾಹನಗಳಿಗೆ ರೇಡಿಯಂ ಪ್ರತಿಫಲಕ ಅಂಟಿಸುವುದು ಅಗತ್ಯ


    ಸಿರಗುಪ್ಪ: ಟ್ರ್ಯಾಕ್ಟರ್, ಲಾರಿ ಸೇರಿ ವಿವಿಧ ವಾಹನಗಳಿಗೆ ರೇಡಿಯಂ ಪ್ರತಿಫಲಕಗಳನ್ನು ಅಂಟಿಸುವುದು ಅಗತ್ಯ ಎಂದು ಪೋಲೀಸ್ ಉಪಾಧೀಕ್ಷಕ ವೆಂಕಟೇಶ ಸಲಹೆ ನೀಡಿದರು.

    ತಾಲೂಕಿನ ದೇಶನೂರು ಗ್ರಾಮದ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ವಾಹನ ಚಾಲಕರಿಗಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಸಭೆಯಲ್ಲಿ ಮಾತನಾಡಿದರು.

    ಪ್ರತಿಯೊಬ್ಬರ ಜೀವವೂ ಅತ್ಯಮೂಲ್ಯವಾದದ್ದು. ವಾಹನಗಳ ವೇಗವು ಮಿತಿಯಲ್ಲಿರಬೇಕು. ಕಾರ್ಖಾನೆಗಾಗಿ ರಾತ್ರಿ ವೇಳೆ ಕಬ್ಬು ತುಂಬಿಕೊಂಡು ಬರುವ ವಾಹನಗಳಿಗೆ ರೇಡಿಯಂ ಪ್ರತಿಫಲಕ ಅಂಟಿಸುವುದರಿಂದ ಹಿಂಬಂದಿ, ಮುಂಬದಿಯ ವಾಹನ ಸವಾರರಿಗೆ ನಿಮ್ಮ ವಾಹನದ ಗಾತ್ರ ಗುರುತಿಸಲು ಸಾಧ್ಯವಾಗುತ್ತದೆ ಎಂದರು.
    ಯಾರೂ ಕುಡಿದು ವಾಹನ ಚಲಾಯಿಸಬಾರದು. ಈ ತಪ್ಪಿಗಾಗಿ 25 ಸಾವಿರ ರೂ. ವರೆಗೂ ದಂಡವಿಧಿಸಲಾಗುವುದು. ಅಲ್ಲದೇ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಾಹನಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷಿದ್ಧವಾಗಿದೆ. ಇತರರಿಗೆ ಕಿರಿಕಿರಿ ಉಂಟುಮಾಡುವ ಧ್ವನಿವರ್ದಕಗಳನ್ನು ಇಂದೇ ತೆಗೆದುಹಾಕಿ. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದರು.

    ಸಿಪಿಐಗಳಾದ ಯಶವಂತ ಬಿಸ್ನಳ್ಳಿ, ಎಂ.ಉಮೇಶ್‌ಕುಮಾರ್, ಸುಂದ್ರೇಶ್ ಹೊಳೆಣ್ಣನವರ್, ಪಿಎಸ್‌ಐಗಳಾದ ಕೆ.ರಂಗಯ್ಯ, ಅರುಣ್‌ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts