More

    ಸಿರಗುಪ್ಪ ತಾಲೂಕಿನಲ್ಲಿ ಉತ್ತಮ ಮಳೆ: ತುಂಬಿ ಹರಿದ ಹಳ್ಳಕೊಳ್ಳ; ಬೆಳೆ, ರೈತರ ಮೊಗದಲ್ಲಿ ಮಂದಹಾಸ

    ಸಿರಗುಪ್ಪ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಜ್ಜೆ, ಜೋಳ, ಹತ್ತಿ ಬಿತ್ತನೆ ಮಾಡಿದ್ದರು. ಆದರೆ, ನಂತರ ವರುಣ ಮರೆಯಾಗಿದ್ದರಿಂದ ಬೆಳೆಗಳು ಒಣಗುವ ಹಂತ ತಲುಪಿದ್ದರಿಂದ ರೈತರು ಆತಂಕಗೊಂಡಿದ್ದರು. ಈಗ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬೆಳೆಗಳಿಗೆ ಕಳೆ ಬಂದಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಭತ್ತದ ಸಸಿ ಮಡಿ, ಜನ-ಜಾನುವಾರುಗೂ ಅನುಕೂಲವಾಗಿದೆ. ಭಾನುವಾರ ತೆಕ್ಕಲಕೋಟೆಯಲ್ಲಿ ಅತಿಹೆಚ್ಚು 62.2 ಮಿಮೀ ಹಾಗೂ ಹಚ್ಚೊಳ್ಳಿಯಲ್ಲಿ ಅತಿಕಡಿಮೆ ಹಚ್ಚೊಳ್ಳಿ 5.2 ಮಿಮೀ ಮಳೆಯಾಗಿದೆ. ಇನ್ನು ಸಿರಿಗೇರಿ 40.2 ಮಿಮೀ, ಕೆ.ಬೆಳಗಲ್ 39.4, ಎಂ.ಸೂಗೂರು 27.6, ಕರೂರು 26.2, ಸಿರಗುಪ್ಪ 11.5 ಮಿಮೀ ಮಳೆ ಸುರಿದಿದೆ.

    ಕಂಪ್ಲಿ ತಾಲೂಕಿನಲ್ಲಿ ಉತ್ತಮ ಮಳೆ: ಪಟ್ಟಣ ಸೇರಿ ತಾಲೂಕಾದ್ಯಂತ ಭಾನುವಾರ ರಾತ್ರಿ ಸರಾಸರಿ 21 ಮಿಮೀ ಮಳೆಯಾಗಿದೆ. ಪಟ್ಟಣದಲ್ಲಿ 37.6 ಮಿಮೀ ಮಳೆ ಸುರಿದಿದೆ. ಮೆಟ್ರಿ, ದೇವಸಮುದ್ರ, ಉಪ್ಪಾರಳ್ಳಿ, ಕಣ್ವಿ ತಿಮ್ಮಲಾಪುರ, ದೇವಲಾಪುರ, ಎಮ್ಮಿಗನೂರು ಭಾಗಗಳ ಮಳೆಯಾಶ್ರಿತ ಸುಮಾರು 4000 ಎಕರೆ ಭೂಮಿಯಲ್ಲಿ ಈಗಾಗಲೇ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ನವಣೆ, ಜೋಳ, ಅಲಸಂದಿ, ಉದ್ದು ಬಿತ್ತನೆಯಾಗಿದ್ದು, ಉತ್ತಮ ಮಳೆಯಿಂದ ಅನುಕೂಲವಾಗಿದೆ. ಕೆಲ ಭಾಗಗಳಲ್ಲಿ ಬಿತ್ತನೆ ಪ್ರಗತಿಯಲ್ಲಿದೆ. ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts