More

    ನಿಟ್ಟೂರು-ಸಿಂಗಾಪುರ ಸೇತುವೆಗೆ 13.60 ಕೋಟಿ ರೂ. ; ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾಹಿತಿ

    ಸಿರಗುಪ್ಪ: ತಾಲೂಕಿನ ನಿಟ್ಟೂರು ಮತ್ತು ಸಿಂಗಪೂರ ಗ್ರಾಮದ ಮಧ್ಯದಲ್ಲಿನ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಲು ಭೂಮಿ ಸ್ವಾಧೀನಕ್ಕಾಗಿ ಜಿಲ್ಲಾಧಿಕಾರಿಗಳ ಸಹಯೋಗದಲ್ಲಿ ಕೆ.ಎಂ.ಇ.ಆರ್.ಸಿ. ಯೋಜನೆಯಿಂದ 13.60 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ನಿಟ್ಟೂರು ಮತ್ತು ಸಿಂಗಪೂರ ಗ್ರಾಮದ ಮಧ್ಯದಲ್ಲಿನ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಲು ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಣ ಬಿಡುಗಡೆಯಾಗಿದೆ.

    ಮೊದಲ ಹಂತದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡು ನಂತರದ ದಿನಗಳಲ್ಲಿ ಸೇತುವೆ ನಿರ್ಮಿಸಲು ಅಂದಾಜು 110ಕೋಟಿ ರೂ. ಹಣ ಬೇಕಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭರಿಸಲಿವೆ. ಈ ಸೇತುವೆ ನಿರ್ಮಾಣದಿಂದ ಗಂಗಾವತಿ, ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿ, ಅಂಕೋಲಕ್ಕೆ ಸಂಪರ್ಕ ಕೊಂಡಿ ಕಲ್ಪಿಸಿದಂತಾಗುತ್ತದೆ.

    ತಾಲೂಕಿನ ಬಹುಜನರ ಬೇಡಿಕೆಯಾದ ರಾರಾವಿ ಸೇತುವೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲ್ಲಿದ್ದು, ಸಿರಗುಪ್ಪ ಕುಡಿಯುವ ನೀರಿನ ಕೆರೆ, ತಲಾ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಶಾಲೆಗಳ ಉದ್ಘಾಟನೆ, ಶಾನವಾಸಪುರ ಸಿರಿಗೇರಿ ಕ್ರಾಸ್ ಬಳಿ ಆರಂಭವಾಗುತ್ತಿರುವ ಪಿಯುಸಿ ಕಾಲೇಜು, ಗೋಸಬಾಳ್ ಬೈರಾಪುರ, ನಾಗಲಾಪುರ ಕುಡುದರಾಳ್, ದರೂರು ಶಾನವಾಸಪುರ ಮದ್ಯದಲ್ಲಿ 25 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ತಾಲೂಕಿಗೆ ಅತಿ ಶೀಘ್ರದಲ್ಲಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಡಿ.ಸೋಮಪ್ಪ, ಮಹಾದೇವ, ಎಸ್.ಮಲ್ಲಿಕಾರ್ಜುನ, ಬಸವನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts