More

    ಜ್ಯೋತಿಷದಿಂದ ನಕಾರಾತ್ಮಕ ಭಾವನೆಗಳು ದೂರ

    ಸಿರಗುಪ್ಪ: ಜನ್ಮಸಮಯ ಬಳಸಿ ಕ್ರಮಬದ್ಧತೆ ಮರೆಯಲು ಮತ್ತು ಜ್ಯೋತಿಷದಲ್ಲಿ ಪದವಿ ಪಡೆವ ಮೂಲಕ ಉತ್ತಮ ಜೀವನದ ಹಾದಿ ತೋರಿಸಲು ಜ್ಯೋತಿಷಾಲಯಗಳು ಸಹಕಾರಿ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಪೀಠಾಧ್ಯಕ್ಷ ಶ್ರೀ ವಾಮದೇವ ಶಿವಾಚಾರ್ಯರು ತಿಳಿಸಿದರು.

    ಅಯ್ಯಪ್ಪಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ವೀರಭದ್ರೇಶ್ವರ ಜ್ಯೋತಿಷಾಲಯ ವತಿಯಿಂದ ಹಮ್ಮಿಕೊಂಡಿದ್ದ ಮೊದಲ ಜ್ಯೋತಿಷ ಕಾರ್ಯಾಗಾರ ಹಾಗೂ ಖ್ಯಾತ ಜ್ಯೋತಿಷಿ ಷಿ ಡಾ.ಚಂದ್ರಶೇಖರ್ ಬಣಗಾರ್ ರಚಿಸಿದ ‘ಭಾವ ಅನುಸಂಧಾನ ಪದ್ಧತಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

    ಈ ಹಿಂದೆ ಸಾಧಕರು ಹೇಳುವ ಜ್ಯೋತಿಷದಲ್ಲಿ ಇದ್ದ ಶಕ್ತಿಯನ್ನು ಕೆಲವರು ಮೌಢ್ಯವನ್ನಾಗಿ ಬಳಸುವ ಮೂಲಕ ಜ್ಯೋತಿಷ ಎಂದರೆ ಸುಳ್ಳು ಎನ್ನುವ ಭಾವನೆ ಮೂಡಿಸಲಾಗಿತು. ಆದರೆ, ಇದೀಗ ಮೈಸೂರಿನಲ್ಲಿರುವ ಸಾಂಸ್ಕೃತಿಕ ಮತ್ತು ಜ್ಯೋತಿಷ ವಿವಿಯಲ್ಲಿ ಪಠ್ಯಗಳ ಬೋಧನೆ ಮೂಲಕ ಸಂಖ್ಯಾಶಾಸ್ತ್ರ ಮತ್ತು ಗ್ರಹಗತಿಗಳ ಲೆಕ್ಕಚಾರದಲ್ಲಿ ವೈಜ್ಞಾನಿಕವಾಗಿ ಜನರಿಗೆ ತಿಳಿಸುವ ಮೂಲಕ ಅವರಲ್ಲಿನ ನಕಾರತ್ಮಕ ಚಿಂತನೆಗಳನ್ನು ದೂರ ಮಾಡಲಾಗುತ್ತಿದೆ. ಸಕರಾತ್ಮಕತೆಯ ಚಿಂತನೆಗಳ ಮೂಲಕ ಉತ್ತಮ ಜೀವನದ ಹಾದಿ ತಿಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

    ಡಾ.ಚಂದ್ರಶೇಖರ್ ಬಣಗಾರ್, ಖ್ಯಾತ ಜ್ಯೋತಿಷಿ ರೇಣುಕಾರಾದ್ಯ ಮಾತನಾಡಿದರು. ಪಂಚಾಚಾರ್ಯ ಜ್ಯೋತಿಷ ಪಾಠ ಶಾಲೆ ಪ್ರಾಚಾರ್ಯ ಚಂದ್ರಮೌಳಿ ಶಾಸ್ತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts