More

    ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ : ವೈದ್ಯಾಧಿಕಾರಿ ದೇವರಾಜ್ ಸಲಹೆ

    ಸಿರಗುಪ್ಪ: ಗರ್ಭಿಣಿಯಾದಾಗಿನಿಂದ ಮಗುವಿನ ಜನನದವರೆಗೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ದೇವರಾಜ್ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ನವಜಾತ ಶಿಶುವಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಗು ಹುಟ್ಟಿದ ಮೊದಲ ವಾರದಲ್ಲಿ ಶೇ.8ರಿಂದ 10ರವರೆಗೆ ತೂಕ ಕಳೆದುಕೊಳ್ಳುವುದು ಸಹಜ. ಮತ್ತೆ 8-10 ದಿನಗಳಲ್ಲಿ ತೂಕ ಹೆಚ್ಚಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ದಿನಕ್ಕೆ ಸರಾಸರಿ 20ರಿಂದ 40 ಗ್ರಾಂ.ನಂತೆ ತೂಕ ಹೆಚ್ಚುತ್ತಾ ಹೋಗುತ್ತದೆ. ಹಾಲುಣಿಸಿದ ತಕ್ಷಣ ಮೊಸರಿನಂತಹ ವಾಂತಿ ಮಾಡಿಕೊಳ್ಳುವುದು ನವಜಾತ ಮಕ್ಕಳಲ್ಲಿ ಸಹಜ. ಹಾಲುಣಿಸಿದ ಬಳಿಕ ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡು ಬೆನ್ನು ತಟ್ಟುವುದರಿಂದ ವಾಂತಿ ತಡೆಗಟ್ಟಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts