More

    ಮಾರ್ಗದರ್ಶಕರಿಲ್ಲದೆ ಬಡವಾದ ಕರುನಾಡು

    ಸಿರಗುಪ್ಪ: ನಗರದ ಬಸವ ಭವನದಲ್ಲಿ ಬಸವ ಬಳಗದಿಂದ ಸಂತ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸುವುದರೊಂದಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಶ್ರೀಬಸವರಾಜಪ್ಪ ಶರಣರು ಮಾತನಾಡಿ, ಸರಳ ಸ್ವಭಾವ ಮತ್ತು ಎಲ್ಲರಿಗೂ ತಿಳಿಯುವ ಹಾಗೆ ಪ್ರವಚನ ನೀಡುತ್ತಿದ್ದರಲ್ಲದೆ ಉತ್ತರ ಕರ್ನಾಟಕ ಭಾಗದ ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿದ್ದ ಅಜ್ಜನವರು ಚಿರಶಾಂತಿಯೊಂದಿಗೆ ಅನಂತವಾಗಿದ್ದರಿಂದ ಮಾರ್ಗದರ್ಶಕರಿಲ್ಲದೆ ಕನ್ನಡನಾಡು ಬಡವಾದಂತಾಗಿದೆ ಎಂದರು.

    ನುಡಿದಂತೆ ನಡೆಯುತ್ತಿದ್ದ ಮಹಾನ್ ಚೇತನ ಎಲ್ಲರಲ್ಲೊಂದಾಗಿ ಬದುಕಿ ಬಾಳುವುದರೊಂದಿಗೆ ಬಯಲತತ್ವ ಆಗಿದ್ದರು. ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಭಗವಂತನನ್ನು ಕಾಣುತ್ತ ತಮ್ಮನ್ನರಸಿ ಬಂದ ತಾಯಿಯಂತೆ ಸಲುಹಿದ ದೈವ ಸ್ವರೂಪಿಯಾಗಿದ್ದ ವಿಜಯಪುರದ ಸಿದ್ಧೇಶ್ವರರು ಸುಸಂಸ್ಕಾರಗಳ ಕಿರೀಟವನ್ನೊತ್ತ ಗುಮ್ಮಟವಾಗಿದ್ದರೆಂದು ಹೇಳಿದರು.

    ನಗರದ ಮುಖ್ಯ ಬೀದಿಗಳಲ್ಲಿ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರವನ್ನು ಪುಷ್ಪಮಾಲೆಯೊಂದಿಗೆ ಅಲಂಕರಿಸಿ ಮಹಾತ್ಮ ಗಾಂಧಿ ವೃತ್ತದವರೆಗೂ ಮೆರವಣಿಗೆ ನಡೆಸಿ ಮಹಾತ್ಮ ಗಾಂಧೀಜಿ ಸ್ಮಾರಕದ ಎದುರು ಮೇಣದ ಬತ್ತಿಗಳನ್ನು ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಮುಖಂಡರಾದ ಬಸವರಾಜ ಸ್ವಾಮಿ, ವೀರಯ್ಯ, ಬಸವರಾಜ ಸ್ವಾಮಿ, ಚೆನ್ನಬಸವನಗೌಡ, ಶಿವಕುಮಾರ್ ಬಳಿಗಾರ್, ಡಾ.ಶಿವಪ್ರಕಾಶ್, ಮಂಜುನಾಥ, ಉಲ್ತಿ ನಂದೀಶ್, ಕಂದಗಲ್ ಗಿರಿ, ಗುರುರಾಜ್, ಶಿವಕುಮಾರ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts