More

    ಸಾಧಕರ ಹಾದಿಯಲ್ಲಿ ಯುವಕರು ನಡೆಯಲಿ, ಡಾ.ಜಿ.ಎಸ್.ಪಾಟೀಲ್ ಹೇಳಿಕೆ

    ಸಿರಗುಪ್ಪ: ಉತ್ತರ ಕರ್ನಾಟಕ ಭಾಗದಲ್ಲಿ ಸಿಂಪಿ ಲಿಂಗಣ್ಣ, ಹರಟಾಳು ರುದ್ರಗೌಡ್ರು, ಬಳ್ಳಾರಿ ಕರಡೀಶ ಶರಣರು ಸೇರಿದಂತೆ ಅನೇಕರು ಬಸವಣ್ಣನ ತತ್ವ ಮಾರ್ಗದರ್ಶನದ ಕಾಯಕದಿಂದ ಅಕ್ಷರ ದಾಸೋಹ ನಡೆಸಿದ್ದಾರೆ ಎಂದು ಶರಣ ಸಾಹಿತಿ ಡಾ.ಜಿ.ಎಸ್.ಪಾಟೀಲ್ ತಿಳಿಸಿದರು.

    ನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬಸವ ಬಳಗ ಟ್ರಸ್ಟ್ ಮತ್ತು ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗಾಯತ ಧರ್ಮದ ಇತಿಹಾಸದ ಸಿದ್ಧಾಂತ ಮತ್ತು ಸಂಘಟನೆಯ ಅಧ್ಯಯನದ ಶಿಬಿರದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

    ಮಹಾನ್ ಸಾಧಕರ ಹಾದಿಯಲ್ಲಿ ಇಂದಿನ ಯುವಕರು ನಡೆಯಬೇಕು. ಇತಿಹಾಸದಲ್ಲಿ ಲಿಂಗಾಯತ ಧರ್ಮವು ಎಲ್ಲಾ ಸಮುದಾಯದ ಜನ ಸಾಮಾನ್ಯರಿಗೆ ಮಠಗಳ ಮೂಲಕ ಶಿಕ್ಷಣ ದಾಸೋಹ ನೀಡಿ ಖ್ಯಾತಿ ಪಡೆದುಕೊಂಡಿದೆ ಎಂದರು.

    ಇದನ್ನೂ ಓದಿ: ಯುವಕರು ಸ್ವಯಂಪ್ರೇರಿತವಾಗಿ ಬಿಜೆಪಿ ಸೇರ್ಪಡೆ

    ಬಸವ ಭವನದ ಬಸವರಾಜ ಶರಣರು, ಕೊಪ್ಪಳ ಜಿಲ್ಲೆಯ ಡಾ.ಸಂಗಮೇಶ್ ಕಲಿಹಾಳು, ಬಸವಬಳಗದ ಅಧ್ಯಕ್ಷ ಎನ್.ಎಂ.ಶಿವಪ್ರಕಾಶ, ಮುಖಂಡರಾದ ಎನ್.ಬಸವರಾಜಪ್ಪ, ಎಂ.ಆರ್.ವಿರೂಪಾಕ್ಷಗೌಡ, ನಾಗನಗೌಡ, ಗಾದಿಲಿಂಗನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts