More

    ಸರ್.ಎಂ.ವಿ ಅವರ ವಾಸ್ತು ಶಿಲ್ಪದಲ್ಲಿ ದೇಶಕ್ಕೆ ಮಾದರಿ

    ಗಂಗಾವತಿ: ವಾಸ್ತು ಶಿಲ್ಪದಲ್ಲಿ ದೇಶಕ್ಕೆ ಮಾದರಿಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಶ್ರೇಷ್ಠ ಸಾಧಕರು ಎಂದು ಹಿರಿಯ ಇಂಜಿನಿಯರ್ ಹಾಗೂ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ ಹೇಳಿದರು.

    ಇದನ್ನೂ ಓದಿ: ವೈವಿಧ್ಯ, ಕಲೆ, ವಾಸ್ತು ಶಿಲ್ಪಗಳ ಸಾಂಸ್ಕೃತಿಕ ಅಧ್ಯಯನ ಅವಶ್ಯ

    ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಅಭಿಯಂತರ ದಿನಾಚರಣೆಯಲ್ಲಿ ಮಾತನಾಡಿದರು. ನೀರಾವರಿ ಯೋಜನೆಗಾಗಿ ವಿಶೇಷ ವಾಸ್ತು ಶಿಲ್ಪ ತಯಾರಿಸಿದ್ದ ಸರ್.ಎಂ.ವಿ. ಕಸಾಪ ಅಸ್ತಿತ್ವದಲ್ಲಿ ಗಮರ್ನಾಹ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಕಾಲೇಜು ಪ್ರಾಚಾರ್ಯ ಬಸಪ್ಪ ನಾಗೋಲಿ, ಟಿಎಂಎಇ ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ, ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಪದಾಧಿಕಾರಿಗಳಾದ ರಮೇಶ ಕುಲ್ಕರ್ಣಿ, ಮಹೇಶ ಸಿಂಗನಾಳ್, ಪ್ರಸನ್ನದೇಸಾಯಿ, ಟಿ.ಆಂಜನೇಯ, ರುದ್ರೇಶ ಆರಾಳ್, ಶ್ರವಣಕುಮಾರ ರಾಯ್ಕರ್, ಲಲಿತಾ ಕಂದಗಲ್ ಇದ್ದರು.

    ಮಹಾನ್ ಕಿಡ್ಸ್: ನಗರದ ಜಯನಗರ ಬಳಿ ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ಸ್‌ ದಿನಾಚರಣೆ ನಿಮಿತ್ತ ಇಂಜಿನಿಯರ್ ವಿಭಾಗದ ವಿವಿಧ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. 
    ಸಿವಿಲ್, ಏಯೋನಾಟಿಕಲ್ಸ್, ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್ ಸೇರಿ ವಿವಿಧ ಮಾದರಿಗಳನ್ನು ಪ್ರದರ್ಶನ ಮತ್ತು ಮಾಹಿತಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕುರಿತು ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಮಾತನಾಡಿದರು.
    ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರು ಮತ್ತು ಪಾಲಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts