More

    ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಿರಿ: ಡಾ.ಜಾಜಿ ದೇವೇಂದ್ರಪ್ಪ ಸಲಹೆ

    ಗಂಗಾವತಿ: ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕಿದ್ದು, 18 ವರ್ಷದ ಮೇಲ್ಪಟ್ಟ ಯುವಕ,ಯುವತಿಯರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ಜಿಲ್ಲಾ ಚುನಾವಣೆ ಆಯೋಗದ ತರಬೇತುದಾರ ಡಾ.ಜಾಜಿ ದೇವೇಂದ್ರಪ್ಪ ಸಲಹೆ ನೀಡಿದರು.


    ತಾಲೂಕಿನ ಸಂಗಾಪುರದ ಶ್ರೀರಾಮಮಂದಿರದ ಆವರಣದಲ್ಲಿ ತಾಪಂ, ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಇವಿಎಂ ಮಶೀನ್ ಮತ್ತು ವಿವಿ ಪ್ಯಾಟ್ ಯಂತ್ರಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ಮತದಾನದ ಪೂರ್ವದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾನದಿಂದ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಮಾಹಿತಿ ನೀಡಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಸಂಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಸದೃಢ ದೇಶಕ್ಕಾಗಿ ಶೇ.100ರಷ್ಟು ಮತದಾನವಾಗಬೇಕಿದ್ದು, ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದರು.
    ಮತಯಂತ್ರ ನಿರ್ವಹಣೆ ಮತ್ತು ಅಗತ್ಯತೆ ಕುರಿತು ತರಬೇತಿದಾರರಾದ ಡಾ.ಇಮ್ಯಾನುವೆಲ್ ಸಂಜಯಾನಂದ ಮಾಹಿತಿ ನೀಡಿದರು.


    ಸ್ವೀಪ್ ಸಂಕಲನ ವಿಷಯ ನಿರ್ವಾಹಕ ಮಹ್ಮದ್ ಜುಬೇರ್ ನಾಯ್ಕ, ಗ್ರಾಪಂ ಪಿಡಿಒ ನಾಗೇಶ ಕುರಡಿ, ತಾಪಂ ಎ್ ಡಿಎ ರಾಘವೇಂದ್ರ, ಗ್ರಾಪಂ ಅಧ್ಯಕ್ಷ ಹರೀಶ ಘಂಟಾ, ಉಪಾಧ್ಯಕ್ಷೆ ಯಲ್ಲಮ್ಮ, ಸದಸ್ಯರಾದ ಹೇಮಣ್ಣ, ವೆಂಕಟೇಶ, ಗೋಪಿ, ಗ್ರಾಮಸ್ಥರಾದ ಜಿಲಾನಿ, ರಾಘವೇಂದ್ರ ಇತರರಿದ್ದರು. ತಾಲೂಕಿನ ಮಲ್ಲಾಪುರದ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕು ಸ್ವೀಪ್ ತಂಡದಿಂದ ಮತದಾನ ಜಾಗತಿ ಕಾರ್ಯಕ್ರಮ ಮಾಡಲಾಯಿತು. ಗ್ರಾಪಂ ಸದಸ್ಯೆ ಲಕ್ಷ್ಮೀ ದೇವಿ, ಕಾರ್ಯದರ್ಶಿ ಸುಶೀಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts