More

    ಪರೀಕ್ಷೆ ಇರಲಿ; ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಮುಂದಾಗಿದೆ ಈ ದೇಶ

    ನವದೆಹಲಿ: ಕರೊನಾ ಸಂಕಷ್ಟ ಯಾವಾಗ ಮುಗಿಯುತ್ತೆ ಎನ್ನುವುದು ಮಿಲಿಯನ್​ ಅಲ್ಲ, ಬಿಲಿಯನ್​ ಡಾಲರ್​ ಪ್ರಶ್ನೆ. ಸದ್ಯಕ್ಕಂತೂ ಇದು ಮುಗಿಯುವ ಲಕ್ಷಣಗಳಿಲ್ಲ ಎನ್ನುವುದಂತೂ ಸತ್ಯ. ಹೀಗಾಗಿ ಈ ಸಂಕಷ್ಟದ ನಡುವೆಯೇ ಎಲ್ಲ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

    ಕರ್ನಾಟಕದಲ್ಲಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬೇಕೋ, ಬೇಡವೂ ಎಂಬುದರ ಬಗ್ಗೆ ಭಾರಿ ಚರ್ಚೆಗಳಾದವು. ಭಾರಿ ವಿರೋಧ ವ್ಯಕ್ತವಾಯಿತು. ಆದರೆ, ಅತ್ತ ಸಿಂಗಾಪುರದಲ್ಲಿ ಸಾರ್ವತ್ರಿಕ ಚುನಾವಣೆಯನ್ನೇ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.

    ಕರೊನಾ ಸಂಕಷ್ಟ ಯಾವಾಗ ಮುಗಿಯುತ್ತೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅದರಿಂದಾಗಿ ಸಿಂಗಾಪುರ​ ಎದುರಿಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳನ್ನು ಎದುರಿಸಲು ಹೊಸದಾಗಿ ಜನಾದೇಶ ಪಡೆಯಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಲೀ ಸಿಯೇನ್​ ಲೂಂಗ್​ ಹೇಳಿದ್ದಾರೆ.

    ಇದನ್ನೂ ಓದಿ; ತಮಿಳುನಾಡಿನಲ್ಲಿ ಕರೊನಾ ನಿಗ್ರಹಕ್ಕೆ ‘ಸಿದ್ಧ’ ಔಷಧ; ಪ್ರಾಚೀನ ಚಿಕಿತ್ಸಾ ಪದ್ಧತಿ ವಿಸ್ತರಿಸಲು ಸರ್ಕಾರ ನಿರ್ಧಾರ

    ಚುನಾವಣೆ ನಡೆಸಲು ಮುಂದಿನ ಏಪ್ರಿಲ್​ ವರೆಗೆ ಕಾಲಾವಕಾಶವಿದೆ. ಆದರೂ ಈಗ ಜನಾದೇಶ ಪಡೆಯಬೇಕಿದೆ ಎಂಬುದು ಪ್ರಧಾನಿ ಅಭಿಪ್ರಾಯ. ಜುಲೈ 10 ರಂದು ಚುನಾವಣೆ ನಡೆಯಲಿವೆ ಹಾಗೂ ಅಭ್ಯರ್ಥಿಗಳು ಜೂನ್​ 30ರೊಳಗಾಗಿ ನಾಮಪತ್ರ ಸಲ್ಲಿಸಬೇಕಿದೆ.
    ದೇಶದಲ್ಲಿ ಕರೊನಾ ಸೋಂಕು ಹಬ್ಬುವುದನ್ನು ನಿಯಂತ್ರಿಸಲಾಗಿದೆ. ಜತೆಗೆ, ಚುನಾವಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ; ಪಾಕಿಸ್ತಾನದ ವಿಮಾನ ದುರಂತಕ್ಕೆ ಕಾರಣವಾಗಿದ್ದು ಕರೊನಾ…! ತನಿಖೆಯಲ್ಲಿ ಹೊರಬಿದ್ದ ಅಚ್ಚರಿ

    ಸದ್ಯ ಚುನಾವಣೆ ಸಭೆ- ಸಮಾರಂಭಗಳನ್ನು ಆಯೋಜಿಸಲು ಅವಕಾಶವಿಲ್ಲ. ಏಕೆಂದರೆ, ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ.

    ದಕ್ಷಿಣ ಕೊರಿಯಾದಲ್ಲೂ ಕಳೆದ ಏಪ್ರಿಲ್​ ಸಂಸತ್​ ಚುನಾವಣೆ ನಡೆಸಲಾಗಿತ್ತು. 3,000ಕ್ಕೂ ಅಧಿಕ ಕರೊನಾ ರೋಗಿಗಳಿಗೂ ಖುದ್ದಾಗಿ ಹಾಗೂ ಅಂಚೆ ಮೂಲಕ ಮತ ಚಲಾಯಿಸುವ ಅವಕಾಶವನ್ನು ನೀಡಲಾಗಿತ್ತು. ಅಲ್ಲಿ 1992ರ ಬಳಿಕ ಅತ್ಯಧಿಕ ಮತ ಚಲಾವಣೆ ಆಗಿತ್ತು.
    ಇದಲ್ಲದೇ, ಅಮೆರಿಕದ ಕೆಲ ರಾಜ್ಯಗಳು ಹಾಗೂ ಸರ್ಬಿಯಾದಲ್ಲೂ ಚುನಾವಣೆಗಳು ನಡೆದಿವೆ.

    ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts