More

    ಹಸಿರೀಕರಣಕ್ಕೆ ಗ್ರಾಮೀಣರು ಒತ್ತು ನೀಡಲಿ-ಶಾಸಕ ವೆಂಕಟರಾವ ನಾಡಗೌಡ ಹೇಳಿಕೆ

    ಸಿಂಧನೂರು: ಗ್ರಾಮೀಣ ಭಾಗದಲ್ಲಿ ಹಸಿರೀಕರಣಕ್ಕೆ ಜನ ಒತ್ತು ನೀಡುವ ಜತೆಗೆ ಅರಣ್ಯ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ತಾಲೂಕಿನ ಅಂಬಾಮಠ ಮುಖ್ಯ ರಸ್ತೆಯಲ್ಲಿ ಭಾನುವಾರ ಸಾಮಾಜಿಕ ಅರಣ್ಯ ವಲಯದಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಸಿ ನೆಡುವುದು ಮುಖ್ಯವಲ್ಲ. ಅದನ್ನು ಪೋಷಿಸುವ ಹೊಣೆಯೂ ಮುಖ್ಯ. ಆಯಾ ರಸ್ತೆಗಳ ವ್ಯಾಪ್ತಿಯಲ್ಲಿ ವಾಸಿಸುವ ಜನರೇ ಇಂಥ ಸಸಿಗಳ ಬಗ್ಗೆ ಕಾಳಜಿ ವಹಿಸಬೇಕು. 3 ವರ್ಷಗಳಲ್ಲಿ ತಾಲೂಕಿನಲ್ಲಿ ಸಾಮಾಜಿಕ ಅರಣ್ಯ ವಲಯ ಉತ್ತಮ ಕೆಲಸ ಮಾಡಿದೆ. ಈಗ ಸಸಿಗಳೆಲ್ಲ ಗಿಡವಾಗಿವೆ. ಇದು ಒಳ್ಳೆಯ ಬೆಳವಣಿಗೆ ಎಂದರು.

    ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ರಸ್ತೆ ಬದಿಯ ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಬೇಕು. ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಬೆಳವಣಿಗೆ ವೀಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು. ಇದೇ ವೇಳ ರಸ್ತೆ ಬದಿಯ ಗಿಡಗಳನ್ನು ಪೋಷಣೆ ಮಾಡಿದ ಕಾವಲುಗಾರ ಅಂಬಣ್ಣ ಅವರನ್ನು ಶಾಸಕ ವೆಂಕಟರಾವ ನಾಡಗೌಡ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಸನ್ಮಾನಿಸಿದರು.

    ತಾಪಂ ಮಾಜಿ ಸದಸ್ಯ ಗೋವಿಂದರಾಜ, ಡಾ.ಚನ್ನನಗೌಡ ಆರ್.ಪಾಟೀಲ್, ಶಿಕ್ಷಕ ರಾಮರಡ್ಡಿ ಹುಡಾ, ವೀರೇಶ, ಸಿಬ್ಬಂದಿ ಇಮಾಮ್‌ಸಾಬ್, ಖಾಸಿಂಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts