More

    ಜಮೀನು ಖರೀದಿ ಹಣ ನೀಡಲು ವಿಳಂಬ ಧೋರಣೆ

    ಸಿಂಧನೂರು: ನಿವೇಶನ ಹಂಚಿಕೆಗಾಗಿ ತಾಲೂಕಿನ ಹೊಸಳ್ಳಿ(ಇಜೆ) ಗ್ರಾಮದ ಸ.ನಂ. 140/1/5ರ 1 ಎಕರೆ ಜಮೀನು ಖರೀದಿಸಿರುವ ರಾಜೀವ್ ಗಾಂಧಿ ವಸತಿ ನಿಗಮ, ಭೂ ಮಾಲೀಕರಿಗೆ ಹಣ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ-ಎಐಕೆಕೆಎಸ್ ತಾಲೂಕು ಸಮಿತಿ ಸೋಮವಾರ ಪ್ರತಿಭಟನೆ ನಡೆಸಿದವು.

    ಇದನ್ನೂ ಓದಿರಿ: ಪಲಾನುಭವಿಗಳಿಗೆ ನಿವೇಶನ ನೀಡಲು ಆಗ್ರಹಿಸಿ ಮನವಿ

    ಈವರೆಗೆ ಹಕ್ಕುಪತ್ರ ನೀಡಿಲ್

    2016-17ರಲ್ಲಿ ಮೇಲ್ಕಾಣಿಸಿದ ಭೂಮಿಯಲ್ಲಿ ನಿವೇಶನ ರಹಿತರಿಗೆ ಮುಖ್ಯಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ವಸತಿ ನೀಡುತ್ತೇವೆಂದು ಹೇಳಿ, ಅರ್ಹ ನಿವೇಶನ ರಹಿತ ಫಲಾನುಭವಿಗಳ ಯಾದಿಯನ್ನು ಗ್ರಾಪಂನಲ್ಲಿ ತಯಾರಿ, ಆನ್‌ಲೈನ್‌ನಲ್ಲಿ ಹಾಕಿದರೂ ಈವರೆಗೆ ಹಕ್ಕುಪತ್ರ ನೀಡಿಲ್ಲ. ಅಲ್ಲದೆ ನಿವೇಶನಕ್ಕಾಗಿ ಖರೀದಿಸಿರುವ 1 ಎಕರೆ ಭೂ ಮಾಲೀಕನಿಗೂ ಹಣ ನೀಡಿಲ್ಲ. ಇದರಿಂದ ವಸತಿ ರಹಿತ ಫಲಾನುಭವಿಗಳು ಹಾಗೂ ಭೂ ಮಾಲೀಕ ಸಂಕಷ್ಟ ಎದುರಿಸುವಂತಾಗಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

    ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಮಾಬುಸಾಬ್ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ಮುದಿಯಪ್ಪ ಹನುಮನಗರ ಕ್ಯಾಂಪ್, ಯಲ್ಲಪ್ಪ ಜವಳಗೇರಾ, ಅಂಬಮ್ಮ ಬಸಾಪುರ, ಹನುಮಂತಪ್ಪ ಗೋಡ್ಯಾಳ, ಫಲಾನುಭವಿಗಳಾದ ನಾಗರತ್ನ, ಗಿರಿಯಮ್ಮ, ಹನುಮಮ್ಮ, ಯಂಕಮ್ಮ, ಹುಲಿಗೆಮ್ಮ, ಹನುಮಂತ, ಶಿವರಾಜ, ಬಾಳಮ್ಮ, ಮಹಾಂತೇಶ, ಶೇಖರಪ್ಪ, ಹಿರೇಲಿಂಗಪ್ಪ, ನಿಂಗಪ್ಪ, ಚನ್ನಮ್ಮ, ಮೌನಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts