More

    ಇಒ ಹುದ್ದೆಗೆ ಅನ್ಯ ಇಲಾಖೆ ಅಧಿಕಾರಿಗಳು ಬೇಡ

    ಸಿಂಧನೂರು: ಅನ್ಯ ಇಲಾಖೆಗಳ ಅಧಿಕಾರಿಗಳನ್ನು ತಾಪಂ ಇಒ ಹುದ್ದೆಗೆ ನೇಮಕ ಮಾಡಿರುವುದನ್ನು ಖಂಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ತಾಲೂಕ ಘಟಕದಿಂದ ತಾಪಂ ಇಒ ಲಕ್ಷ್ಮೀದೇವಿಗೆ ಮನವಿ ಸಲ್ಲಿಸಲಾಯಿತು.

    ತಾಪಂ ಇಒ ಹುದ್ದೆ ಉಪ ವಿಭಾಗಾಧಿಕಾರಿಗೆ ಸಮಾನಾಂತರ ಹುದ್ದೆಯಾಗಿದ್ದು, 32 ಇಲಾಖೆಗಳ ಮೇಲ್ವಿಚಾರಣೆ ಮತ್ತು ತಾಪಂ ಅಧೀನದ ಎಲ್ಲ ಅಭಿವೃದ್ಧಿ ಇಲಾಖೆಗಳ ಬಿಲ್‌ಗಳಿಗೆ ಮೇಲು ರುಜು ಮಾಡುವ ಅಧಿಕಾರ ಮತ್ತು ಕರ್ತವ್ಯ ಹೊಂದಿದೆ. 15ನೇ ಹಣಕಾಸು, ಇ- ಸ್ವತ್ತು, ಸುವರ್ಣ ಗ್ರಾಮ, ಅಮೃತ ಗ್ರಾಮ, ಮುಖ್ಯ ಮಂತ್ರಿ ಗ್ರಾಮವಿಕಾಸ ಸೇರಿ ಹಲವು ಯೋಜನೆಗಳೊಂದಿಗೆ ಸರ್ಕಾರ ಬಿಡುಗಡೆಗೊಳಿಸುವ ಅನುದಾನಗಳ ಬಳಕೆ ನೇರವಾಗಿ ಜಿಪಂ, ತಾಪಂ, ಗ್ರಾಪಂಗೆ ಬಿಡುಗಡೆಯಾಗುವ ಅನುದಾನಗಳ ಕ್ರಿಯಾಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಅಧಿಕಾರಿಯನ್ನು ಹೂವಿನಹಡಗಲಿ ತಾಪಂ ಇಒ ಹುದ್ದೆಗೆ ನಿಯೋಜಿಸಿ ಆದೇಶಿಸಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಆದೇಶ ರದ್ದುಪಡಿಸಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts