More

    ಮಹಿಳೆಯರು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವಂತೆ ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಗುರಿಕಾರ ಸಲಹೆ


    ಸಿಂಧನೂರು:
    ಮಹಿಳೆ ಸಾಧಿಸುವ ಛಲ ತೊಡಬೇಕು. ಅದಕ್ಕೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕೆಂದು ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಗುರಿಕಾರ ಹೇಳಿದರು.

    ನಗರದ ಸರ್ಕಾರಿ ಮಹಾವಿದ್ಯಾಲಯ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಾಂಸ್ಕೃತಿಕ ಸಮಿತಿ, ರ‌್ಯಾಗಿಂಗ್ ವಿರೋಧಿ ಸಮಿತಿ, ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ಹಾಗೂ ಮೈತ್ರಿ ಸಹಾಯವಾಣಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ನಾವು ಮೇಲುಗೈ ಸಾಧಿಸಿದ್ದೇವೆ. ಆದಾಗ್ಯೂ ಇನ್ನೂ ಬಹಳಷ್ಟು ಮಹಿಳಾ ಸುಧಾರಣೆಗಳು ಆಗಬೇಕಾದ ಅವಶ್ಯಕತೆಯಿದೆ. ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಹೇಳಿದರು.

    ಕೊಪ್ಪಳ ಜಿಲ್ಲಾ ಪೊಸ್ಕೋ ಕಾಯ್ದೆಯ ವಿಶೇಷ ಅಭಿಯೋಜಕಿ ಗೌರಮ್ಮ ಎಲ್.ದೇಸಾಯಿ ಉಪನ್ಯಾಸ ನೀಡಿ, ಸಣ್ಣ ಸಣ್ಣ ಆಸೆ, ಆಮಿಷಗಳಿಗೆ ಹೆಣ್ಣು ಮಕ್ಕಳು ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿ. ಪ್ರೀತಿ ಹೆಸರಿನಲ್ಲಿ ಮೋಸ ಹೋಗಿ, ಅನೇಕ ಮಹಿಳೆಯರು ಕೋರ್ಟ್‌ಗೆ ಅಲೆದಾಡುವಂತಹ ಪರಿಸ್ಥಿತಿ ಕಾಣಬಹುದು. ಕುಟುಂಬದಲ್ಲಿನ ಹೆಣ್ಣು ಮಗಳು ಜಾಗೃತವಾಗಿರಬೇಕು ಎಂದರು.

    ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯೆ ಸುವರ್ಣಕಲಾ ಶೇಠ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹನುಮಂತಪ್ಪ ಎಂ, ಕನ್ನಡ ವಿಭಾಗ ಮುಖ್ಯಸ್ಥ ಕೆ.ಖಾದರ್ ಬಾಷಾ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶೀತಲ್ ಉದಗಿರಿ, ಸಹಾಯಕ ಪ್ರಾಧ್ಯಾಪಕರಾದ ಬಸವರಾಜ ತಡಕಲ್, ಸಂಗನಗೌಡ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts