More

    ಕುರುಬರನ್ನು ಎಸ್ಟಿಗೆ ಸೇರ್ಪಡಿಸಲು ಒತ್ತಾಯಿಸಿ ದೀರ್ಘ ಹೋರಾಟ; ಮಾಜಿ ಸಂಸದ ಕೆ.ವಿರೂಪಾಕ್ಪಪ್ಪ ಮಾಹಿತಿ

    ನ.8 ರಂದು ಕಾಗಿನೆಲೆಯಲ್ಲಿ ಮಹಿಳಾ ಸಮಾವೇಶ

    ಸಿಂಧನೂರು: ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡಿಸುವಂತೆ ಒತ್ತಾಯಿಸಿ ಹಂತ ಹಂತವಾಗಿ ದೀರ್ಘ ಹೋರಾಟ ನಡೆಸಲಾಗುವುದು ಎಂದು ಕುರುಬ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

    ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಗಿನೆಲೆ ಕನಕ ಗುರುಪೀಠ ನಾಲ್ಕು ವಿಭಾಗೀಯ ಪೀಠಾಧ್ಯಕ್ಷರು ಒಂದಾಗಿ ಈ ಹೋರಾಟದ ನೇತೃತ್ವ ವಹಿಸಿದ್ದಾರೆ. ಈ ಹೋರಾಟ ಆರಂಭಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಮುಖ್ಯ ಕಾರಣಿಕರ್ತರು. ನಾಲ್ಕು ಪೀಠಾಧಿಪತಿಗಳು ಮಾಜಿ ಸಿಎಂ ಸಿದ್ದರಾಮಯ್ಯರ ಮನವೊಲಿಸಿದ್ದಾರೆ. ಈಗಾಗಲೇ ಅ.11 ರಂದು ಬೆಂಗಳೂರಿನಲ್ಲಿ ಸಮುದಾಯದ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಮಾವೇಶ ನಡೆಸಲಾಗಿದೆ.

    ನ.8 ರಂದು ಕಾಗಿನೆಲೆಯಲ್ಲಿ ಮಹಿಳಾ ಸಮಾವೇಶ ಹಾಗೂ ರಾಜ್ಯ ಮಟ್ಟದ ಮಹಿಳಾ ಸಮಿತಿ ರಚನೆ, ನ.19 ರಂದು ರಾಜ್ಯದ ಕುರುಬ ಸಮುದಾಯದ ಗುರುಗಳು, ಒಡೆಯರ್ ಸಮಾವೇಶ ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ, ನ.22 ರಂದು ಗದಗ, ಹುಬ್ಬಳ್ಳಿ, ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವಿಭಾಗ ಮಟ್ಟದ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

    ಡಿ.6 ರಂದು ಬೀದರ್, ಗುಲ್ಬರ್ಗಾ, ಯಾದಗಿರಿ ಸಮಾವೇಶ, ಡಿ.27 ರಂದು ಸಿಂಧನೂರಿನಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಸಮಾವೇಶ, ನವೆಂಬರ್ ಕೊನೇ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ದೆಹಲಿಗೆ ನಿಯೋಗ ತೆರಳಿ ಸಂಬಂಧಿಸಿದ ಸಚಿವರ ಭೇಟಿ, ಮಕರ ಸಂಕ್ರಾಂತಿಯಂದು 4 ಪೀಠಾಧ್ಯಕ್ಷರ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ 20 ದಿನಗಳ ಕಾಲ ನಡೆಸಲಾಗುವುದು ಎಂದರು.

    ತುರ್ವಿಹಾಳ ಮಾದಯ್ಯ ಗುರುವಿನ್, ಮುಖಂಡರಾದ ನಿರುಪಾದೆಪ್ಪ ಗುಡಿಹಾಳ, ಹನುಮಂತಪ್ಪ, ಪೂಜಪ್ಪ ಪೂಜಾರಿ, ಭೀಮಣ್ಣ ಸಂಗಟಿ, ವೆಂಕೋಬ ಸಾಸಲಮರಿ, ವೆಂಕಟೇಶ ಭಂಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts