More

    ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಒಕ್ಕೂಟ ಆಗ್ರಹ

    ಸಿಂಧನೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಒಕ್ಕೂಟ ಬುಧವಾರ ಪ್ರತಿಭಟನೆ ನಡೆಸಿತು.

    ಸರ್ಕಾರದಿಂದ ಬಿಡಿಗಾಸು ಅನುದಾನ ಪಡೆಯದೆ ಕೇವಲ ವಿದ್ಯಾರ್ಥಿಗಳ ಬೋಧನಾ ಶುಲ್ಕ, ದಾನಿಗಳು ಹಾಗೂ ಹಿತೈಷಿಗಳ ಸಹಾಯ ಸಹಕಾರಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಸ್ವಾರ್ಥದಿಂದ ಸೇವೆ ಮಾಡುತ್ತಿವೆ. ಆದರೆ, ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅನೇಕ ಸಮಾಜಘಾತುಕ ಶಕ್ತಿಗಳು ಕೆಂಗಣ್ಣು ಬೀರಿವೆ. ಉಪಾಧ್ಯಾಯರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪಾಲಕರು ಮತ್ತು ವಿದ್ಯಾಸಂಸ್ಥೆಗಳ ನಡುವೆ ಇರುವ ಸಂಬಂಧಗಳನ್ನು ಕೆಡಿಸುವ ಪ್ರಯತ್ನವನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ. ಜನವರಿ ಒಂದರಿಂದ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು ಸರ್ಕಾರದ ಆದೇಶದ ಪ್ರಕಾರ ಶೇ.70 ರಷ್ಟು ಶುಲ್ಕ ಪಾವತಿಸುವಂತೆ ಪಾಲಕರಿಗೆ ಇಲಾಖೆಯಿಂದ ನಿರ್ದೇಶನವಿದ್ದರೂ ಕೆಲವು ಜನ ಬೋಧನಾ ಶುಲ್ಕ ಪಾವತಿಸದೆ ಹಾಗೂ ಕಳೆದ ಹಲವು ವರ್ಷಗಳ ಶುಲ್ಕ ಪಾವತಿಸದೆ ತಮ್ಮದೇನು ತಪ್ಪಿಲ್ಲ ಎಂದು ವರ್ತಿಸುತ್ತಿದ್ದಾರೆ. ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ಕೊಟ್ಟಿರುವ ರೀತಿಯಲ್ಲಿ ಸರ್ಕಾರ ಶಾಲಾ-ಕಾಲೇಜುಗಳಿಗೆ ಕಾನೂನಾತ್ಮಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

    ಒಕ್ಕೂಟ ಜಿಲ್ಲಾಧ್ಯಕ್ಷ ಟಿ.ಬಸವರಾಜ, ಪ್ರಧಾನ ಕಾರ್ಯದರ್ಶಿ ಡಿ.ಕೆ.ಮುರಳಿಧರ್, ಕೋಶಾಧ್ಯಕ್ಷರಾದ ಮಲ್ಲನಗೌಡ ಕಾನಿಹಾಳ, ಮಹ್ಮದ್ ಇಕ್ಬಾಲ್, ಸಹ ಕೋಶಾಧ್ಯಕ್ಷ ಕೆ.ಇ.ನರಸಿಂಹ, ಉಪಾಧ್ಯಕ್ಷರಾದ ಎಸ್.ಎಲ್. ಕೇಶವರೆಡ್ಡಿ, ಎಚ್.ಶರ್ಫುದ್ದೀನ್, ವೈ.ನರೇಂದ್ರನಾಥ, ಆದಯ್ಯ ದಳಪತಿ, ಚಂದ್ರಶೇಖರ ಬಲ್ಲಟಗಿ, ಚನ್ನಪ್ಪ ಬೂದಿನಾಳ, ವೀರೇಶ ಅಗ್ನಿ, ಡಾ.ಕೆ.ಶಿವರಾಜ, ಡಿ.ಎಚ್.ಕಂಬಳಿ, ಸರಸ್ವತಿ ಪಾಟೀಲ್, ದಾಕ್ಷಾಯಿಣಿ ಮಾಪಾ, ಶೋಹೆಬ್‌ಪಾಷಾ, ಆನಂದ ನಾಯ್ಡು, ವಿರುಪಣ್ಣ, ಬಸವರಾಜ ಅರಗಿನಮರಕ್ಯಾಂಪ್, ಗೌತಮ ಮೆಹ್ತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts