More

    ಭೂಮಿ ಪಟ್ಟಾ, ನಿವೇಶನ ಹಕ್ಕುಪತ್ರ ನೀಡಲು ತಾಲೂಕು ರೈತ ಸಂಘದಿಂದ ಪ್ರತಿಭಟನೆ

    ಸಿಂಧನೂರು: ಮಸ್ಕಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಬಗರ್‌ಹುಕುಂ ರೈತರ ಸಾಗುವಳಿ ಭೂಮಿಗೆ ಪಟ್ಟಾ ಹಾಗೂ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ತಾಲೂಕ ಸಮಿತಿಯಿಂದ ಮಂಗಳವಾರ ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಬಸವವೃತ್ತ ಮಾರ್ಗವಾಗಿ ತಹಸೀಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಫಾರಂ ನಂ.57ರ ಅಡಿಯಲ್ಲಿ ರೈತರು ಅರ್ಜಿ ಹಾಕಿದ ಎಕ್ಕ ರೀತಿಯ ಸರಕಾರಿ, ಪರಂಪೋಕ, ಖಾರಿಜಖಾತಾ, ಸರ್ಕಾರಿ ಭೂಮಿ, ಗೈರಾಣಿ, ಗೋಮಾಳ, ಅರಣ್ಯ ಇನ್ನಿತರ ಜಮೀನುಗಳಿಗೆ ಸಂಬಂಧಿಸಿ ಸಾಗುವಳಿದಾರರ ಜಮೀನಿಗೆ ಹೋಗಿ ಪಂಚನಾಮೆ ನಡೆಸಿ ಕಡ್ಡಾಯವಾಗಿ ವರದಿ ನೀಡುವಂತೆ ಸ್ಪಷ್ಟ ವರದಿ ಹೊರಡಿಸುವಂತೆ ರೈತರು ಒತ್ತಾಯಿಸಿದರು.

    ಮೂರು ತಲೆಮಾರಿನಿಂದ ಸಾಗುವಳಿ ಮಾಡುವ ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡಬೇಕು. 94 ಸಿ, 94 ಸಿಸಿ ಯೋಜನೆಯಡಿ ಅರ್ಜಿ ಹಾಕಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ಸಿಂಧನೂರಿನ ದೋಬಿಗಲ್ಲಿ ಹಾಗೂ ಏಳುರಾಗಿ ಕ್ಯಾಂಪ್ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.

    ಸಂಘಟನೆ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್, ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲೂಕುಧ್ಯಕ್ಷ ರಮೇಶ ಪಾಟೀಲ್ ಬೇರ‌್ಗಿ, ಸಂತೋಷ ಹಿರೇದಿನ್ನಿ, ಬಸವರಾಜ ಬಾದರ್ಲಿ, ಚಿಟ್ಟಿಬಾಬು, ಮಾರುತಿ ಜಿನ್ನಾಪುರ, ಯಲ್ಲಪ್ಪ, ಮರಿಸ್ವಾಮಿ, ನಿಂಗಪ್ಪ, ಛತ್ರಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts