More

    ತುರ್ವಿಹಾಳ-ಬಸವಣ್ಣಕ್ಯಾಂಪ್ ರಸ್ತೆ ಅಸಮರ್ಪಕ, ನಿವಾಸಿಗಳ ದೂರು

    ಸಿಂಧನೂರು: ತಾಲೂಕಿನ ತುರ್ವಿಹಾಳದಿಂದ ಬಸವಣ್ಣ ಕ್ಯಾಂಪ್‌ವರೆಗಿನ ರಸ್ತೆ ಕಾಮಗಾರಿ ಅಸಮಪರ್ಕವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

    ತುರ್ವಿಹಾಳ ಪಟ್ಟಣದಿಂದ ಬಸವಣ್ಣಕ್ಯಾಂಪ್, ಮದ್ಯಕ್ಯಾಂಪ್‌ವರೆಗಿನ ರಸ್ತೆ ಬಹು ವರ್ಷಗಳಿಂದ ದುರಸ್ತಿ ಕಂಡಿರಲಿಲ್ಲ. ಈಗ ನೀರಾವರಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿರುವುದು ಸ್ವಾಗತಾರ್ಹ ಆದರೆ, ರಸ್ತೆ ನಿರ್ಮಾಣ ಕಾರ್ಯ ಮಾತ್ರ ಅಸಮರ್ಪಕವಾಗಿದೆ. ಎಸ್ಟಿಮೇಟ್ ಉಲ್ಲಂಘಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

    ಇದನ್ನೂ ಓದಿ: ಅಗೆದು ವರ್ಷವಾದರೂ ದುರಸ್ತಿಯಾಗದ ರಸ್ತೆ!

    ಕಂಕರ್ ಮತ್ತು ಮರಂ 22 ಅಡಿ ಅಗಲ ಹಾಕುವ ಬದಲು 18 ಪೀಟ್ ಹಾಕಲಾಗಿದೆ. 5 ಇಂಚು ಎತ್ತರ ಬದಲು 3 ಇಂಚಿನಷ್ಟು ಮಾತ್ರ ರಸ್ತೆ ಮಾಡಲಾಗುತ್ತಿದೆ. ಇದರಿಂದ ರಸ್ತೆ ಬಹುಬೇಗ ಹಾಳಾಗುತ್ತದೆ. ಸಂಬಂಧಿಸಿದ ಅಧಿಕಾರಿ ಗಮನಕ್ಕೆ ತಂದಿದ್ದು, ಹಾರಿಕೆ ಉತ್ತರ ನೀಡುತ್ತಿದ್ದಾರೆ.

    ಕಾಮಗಾರಿ ನಿಲ್ಲಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸುತ್ತಿದ್ದಾರೆ. ಮೇಲಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿ ಗುಣಮಟ್ಟದ ರಸ್ತೆ ಮಾಡಿಸಿಕೊಡಬೇಕೆಂದು ನಿವಾಸಿಗಳಾದ ಬಾಲಪ್ಪ ಕುಂಟೋಜಿ, ಲಿಂಗಪ್ಪ ಗೊರೇಬಾಳ, ಯಲ್ಲಪ್ಪ ಬಾಗೋಡಿ, ಗವಿಸಿದ್ದಪ್ಪ, ಸಣ್ಣ ಶಿವರಾಯಪ್ಪ, ನಾಗಪ್ಪ ಗುಂಡೂರು, ಅಮರೇಶ ಕುಂಟೋಜಿ, ಹನುಮೇಶ ಛಲವಾದಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts