More

    ಮಾನವನ ಒಳಿತಿಗಾಗಿ ಸಂವಿಧಾನ ರಚನೆ

    ಸಿಂಧನೂರು: ಮಾನವ ಜನಾಂಗದ ಒಳಿತಿಗಾಗಿ ಸಂವಿಧಾನ ನೀಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಸಲ್ಲುತ್ತದೆ ಎಂದು ಮಕ್ಕಳ ತಜ್ಞ ಡಾ.ಕೆ.ಶಿವರಾಜ ಹೇಳಿದರು.

    ಮಲ್ಲಾಪುರದಲ್ಲಿ ಭಾನುವಾರ ಸಂಜೆ ದಲಿತ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಮನೆ ಮನೆಗೆ ಮಹಾನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಹುತ್ವದ ಪರಿಕಲ್ಪನೆಯೇ ಭಾರತವಾಗಿದೆ. ಮನುಸ್ಪತಿ ಗ್ರಂಥದಲ್ಲಿ ಬ್ರಾಹ್ಮಣರು ಅಪರಾಧ ಮಾಡಿದರೆ ಶಿಕ್ಷೆ ಇಲ್ಲ. ಅದೇ ಬೇರೆ ಜಾತಿ-ಜನಾಂಗದವರು ಮಾಡಿದರೆ ಅಂಥವರ ನಾಲಿಗೆ ಸೀಳಬೇಕು. ಅವರನ್ನು ಊರಿನಿಂದ ಬಹಿಷ್ಕರಿಸಬೇಕು ಎಂಬ ಸಿದ್ಧಾಂತಗಳಿವೆ. ಆದರೆ ಸಂವಿಧಾನ ಮೂಢನಂಬಿಕೆ ಹಾಗೂ ಶೋಷಣೆ ತೊಲಗಿಸುತ್ತದೆ. ಇಂತಹ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

    ಕವಿ ಹೊಳೆಯಪ್ಪ ದಿದ್ದಿಗಿ ಮಾತನಾಡಿ, ಪ್ರಸ್ತುತ ಯುವ ಜನಾಂಗ ಶಿಕ್ಷಣ ಮತ್ತು ಉದ್ಯೋಗದ ಕಡೆಗೆ ಮುಖ ಮಾಡುತ್ತಿಲ್ಲ, ಬದಲಾಗಿ ಕೆಟ್ಟ ಹವ್ಯಾಸಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪರಿಷತ್ ಸಂಘಟನಾ ಸಂಚಾಲಕ ಈಶ್ವರ್ ಹಲಗಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಉಪಾಧ್ಯಕ್ಷ ಡಾ.ಅರುಣಕುಮಾರ ಬೇರ‌್ಗಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ ಡಾ.ಹುಸೇನಪ್ಪ ಅಮರಾಪುರ, ನಗರಸಭೆ ಸದಸ್ಯ ಕೆ.ಹನುಮೇಶ, ಪ್ರಮುಖರಾದ ಯಮನಪ್ಪ ಮಲ್ಲಾಪೂರು, ಯಂಕನಗೌಡ ಪೊ.ಪಾ, ತಿಮ್ಮನಗೌಡ ಮಲ್ಲಾಪೂರು, ವಕೀಲ ಅಯ್ಯಪ್ಪ, ಮಹಾಂಕಾಳೆಪ್ಪ ಮೂಲಿಮನಿ, ವಕೀಲ ಹನುಮಂತಂಪ್ಪ, ಪಂಪನಗೌಡ ಪೊ.ಪಾ, ಮೌಲಪ್ಪ ಭಂಡಾರಿ, ಶೇಖರಪ್ಪ ಕುರುಬರು, ವೆಂಕಟೇಶ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts