More

    ಭತ್ತದ ನಾಟಿಯಲ್ಲಿ ಬ್ಯುಸಿಯಾದ ಎಡದಂಡೆ ನಾಲೆ ಕೃಷಿಕರು

    ಸಿಂಧನೂರು: ಜಿಟಿಜಿಟಿ ಮಳೆ ಬಿಡುವು ನೀಡಿರುವ ಕಾರಣ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ. ಭತ್ತದ ಸಸಿ ಮಡಿ ಮಾಡಿಕೊಂಡಿರುವ ರೈತರು ನಾಟಿ ಕೈಗೊಂಡಿದ್ದಾರೆ.

    ತಾಲೂಕಿನಲ್ಲಿ 64 ಸಾವಿರ ಹೆಕ್ಟೇರ್ ಭತ್ತ ನಾಟಿ ಪ್ರದೇಶವಿದ್ದು ಜು.10ರಿಂದಲೇ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿದು ಬಂದಿದ್ದು ಜತೆಗೆ ಮಳೆಯೂ ಆರಂಭಗೊಂಡಿದ್ದರಿಂದ ಹೊಲಗಳು ಹಸಿಯಾಗಿವೆ. ಆದರೆ ನಾಟಿಗೆ ಸಸಿ ಸಿದ್ಧವಿರಲಿಲ್ಲ. ಕಳೆದ ವಾರದಿಂದ ತಾಲೂಕಿನಲ್ಲಿ ಭತ್ತ ನಾಟಿಗೆ ಹೊಲಗಳನ್ನು ಸಿದ್ಧಗೊಳಿಸಲಾಗಿದೆ.

    ತುಂಗಭದ್ರಾ ಎಡದಂಡೆ ನಾಲೆ ಹತ್ತಿರದಲ್ಲಿರುವ ಜಮೀನುಗಳಲ್ಲಿ ಈಗಾಗಲೇ ಭತ್ತ ನಾಟಿ ಮುಗಿದಿದೆ. ಗುಂಜಳ್ಳಿ, ಜಾಲಿಹಾಳ, ಗುಡದೂರು ಹೋಬಳಿ ವ್ಯಾಪ್ತಿಯಲ್ಲಿ ಭತ್ತ ನಾಟಿ ಜೋರಾಗಿದೆ. ಈ ತಿಂಗಳ ಅಂತ್ಯದೊಳಗೆ ಶೇ.50 ಭತ್ತ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ.

    ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಮುಂಗಾರು ಹಾಗೂ ಹಿಂಗಾರು ಬೆಳೆ ಪೂರ್ಣ ಪ್ರಮಾಣದಲ್ಲಿ ಪಡೆಯುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಮುಂಗಾರಿನಲ್ಲಿ 64 ಸಾವಿರ ಹೆಕ್ಟೇರ್ ಸಂಪೂರ್ಣ ಭತ್ತ ನಾಟಿ ಸಾಧ್ಯತೆಯಿದೆ. ಆಗಸ್ಟ್ ಅಂತ್ಯದವರೆಗೆ ಭತ್ತ ನಾಟಿ ಕಾರ್ಯ ನಡೆಯಲಿದೆ. ಈ ಬಾರಿ ರಸಗೊಬ್ಬರ ಬೆಲೆ ಏರಿಕೆ ರೈತರಿಗೆ ಶಾಕ್ ನೀಡಿದೆ. ಚೀಲಕ್ಕೆ 100-150 ರೂ. ಬೆಲೆ ಏರಿಕೆಯಾಗಿದ್ದು ಅಗತ್ಯ ಗೊಬ್ಬರ ಪೂರೈಕೆಯಾಗುತ್ತಿದ್ದರೂ ಬೆಲೆ ನೋಡಿ ದಂಗಾಗುವಂತಾಗಿದೆ.

    ತಾಲೂಕಿನಲ್ಲಿ ಭತ್ತ ನಾಟಿ ಚುರುಕುಗೊಂಡಿದೆ. ಜು.20ರಿಂದಲೇ ಭತ್ತ ನಾಟಿ ಹೆಚ್ಚಿನ ಚುರುಕು ಪಡೆದುಕೊಂಡಿದೆ. ಆಯಾ ತಳಿಯ ಬೀಜದ ಸಸಿಮಡಿ ಹಾಕಿಕೊಂಡಿರುವ ರೈತರು ತಮಗೆ ಅನಕೂಲವಾಗುವ ತಳಿಯ ಭತ್ತ ಬೆಳೆದುಕೊಳ್ಳಲು ಸಜ್ಜಾಗಿದ್ದಾರೆ. ರಸಗೊಬ್ಬರದ ಕೊರತೆ ಇಲ್ಲ.

    | ಡಾ.ಪ್ರಿಯಾಂಕಾ ಸಹಾಯಕ ಕೃಷಿ ನಿರ್ದೇಶಕಿ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts