ಅವರು ಕೊಡುವ ಹಣ ಪಡೆದು, ನಮಗೆ ವೋಟ್ ಹಾಕಿ; ಮಸ್ಕಿ ಕ್ಷೇತ್ರದ ಮತದಾರರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ

05042021 Sindhanoor maski by election congress road show
Published on

ಸಿಂಧನೂರು: ಉಪಚುನಾವಣೆಯಲ್ಲಿ ಹಣ ತಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಚುನಾವಣೆ ಮಾಡುತ್ತಿದ್ದಾರೆ. ಆ ಹಣ ಲೂಟಿ ಹೊಡೆದದ್ದಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರು ಚೆಕ್ ಮೂಲಕ ಲಂಚ ಪಡೆದಿದ್ದರೆ, ವಿಜಯೇಂದ್ರ ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದಾರೆ. ಅವರು ಕೊಟ್ಟ ದುಡ್ಡು ತೆಗೆದುಕೊಳ್ಳಿ. ಆದರೆ, ವೋಟು ಮಾತ್ರ ತುರ್ವಿಹಾಳಗೆ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತುರ್ವಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಪರ ಸೋಮವಾರ ಮತಯಾಚನೆಗೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. 2013-2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು, 30 ಕೋಟಿ ರೂ. ಬಂದಾಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಕ್ಷೇತ್ರದ ಜನರ ಅಭಿಪ್ರಾಯ ಪಡೆಯದೆ ಹಣಕ್ಕಾಗಿ ಶಾಸಕ ಸ್ಥಾನ ಮಾರಾಟ ಮಾಡಲಾಗಿದೆ. ಅಧಿಕಾರ ಶಾಶ್ವತವಲ್ಲ. ಸಾಧನೆ ಶಾಶ್ವತ. ಸ್ವಾಭಿಮಾನದ ಸಂಕೇತವಾಗಿರುವ ಬಸನಗೌಡರನ್ನು ಬೆಂಬಲಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net