More

    ಎಂಇಎಸ್, ಮಹಾ ಸಚಿವರ ಪುಂಡಾಟಕ್ಕೆ ವಿರೋಧ

    ಸಿಂಧನೂರು: ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಮಹಾರಾಷ್ಟ್ರ ಸಚಿವರ ಪುಂಡಾಟಿಕೆ ವಿರೋಧಿಸಿ ಕನ್ನಡ ಜಾಗೃತಿ ವೇದಿಕೆ ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

    ಶಾಂತಿ, ಸಾಮರಸ್ಯದ ನೆಲೆಯಾಗಿದ್ದ ಬೆಳಗಾವಿಯ ಗಡಿಯಲ್ಲಿ ಅನಗತ್ಯ ತಂಟೆಗೆ ಮುಂದಾಗಿರುವ ಮಹಾರಾಷ್ಟ್ರ ಸರ್ಕಾರಕ್ಕೆ ತಾವೇನು ಮಾಡುತ್ತಿದ್ದೇವೆಂಬ ಅರಿವು ಮುಖ್ಯ. ಮಹಾಜನ್ ವರದಿ ಜಾರಿಗೆ ತಾನೇ ಮೊದಲು ಉತ್ಸುಕತೆ ತೋರಿ, ಬಳಿಕ ಅದರ ಅಂತಿಮ ವರದಿಗೆ ಬೆನ್ನು ಹಾಕುತ್ತಿರುವ ಅಲ್ಲಿನ ಆಡಳಿತದ ಮನೋಭಾವ ಅತ್ಯಂತ ಗೊಂದಲದಿಂದ ಕೂಡಿದೆ.

    ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಎಂಇಎಸ್ ಪುಂಡರನ್ನು ಕೂಡಲೇ ಬಂಧಿಸಬೇಕು. ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಡಿಸಿಪಿ ಹಾಗೂ ಎಸಿಪಿಯನ್ನು ಕೂಡಲೇ ಅಮಾನತು ಮಾಡಬೇಕು. ಗೂಂಡಾಗಿರಿ ಮತ್ತು ಶಾಂತಿ ಸುವ್ಯವಸ್ಥೆಗೆ ಮಾರಕವಾಗಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಕೇಂದ್ರ ಸರ್ಕಾರ ಉಭಯ ರಾಜ್ಯಗಳ ಸರ್ಕಾರಗಳಿಗೆ ಬುದ್ಧಿ ಹೇಳಬೇಕು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನಿತ್ಯ ಸಂಚರಿಸುವ ಸಾರಿಗೆ ವಾಹನಗಳು ಮತ್ತು ಖಾಸಗಿ ವಾಹನಗಳಿಗೆ ಸೂಕ್ತ ಭದ್ರತೆ ನೀಡಬೇಕು. ಮಹಾಜನ್ ವರದಿಯನ್ನು ಉಭಯ ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು.

    ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಉಮೇಶಗೌಡ ಅರಳಹಳ್ಳಿ, ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎನ್.ವೀರೇಶ, ಜಿಲ್ಲಾ ಸಂಚಾಲಕ ಹುಸೇನ್‌ಬಾಷಾ, ಉಪಾಧ್ಯಕ್ಷ ರಾಘವೇಂದ್ರ, ತಾಲೂಕು ಅಧ್ಯಕ್ಷ ದೌಲಾಸಾಬ್ ದೊಡ್ಡಮನಿ, ಹನೀಫ್, ಆದಿ ಮೇಸ್ತ್ರಿ, ಖಾಜಾ ಬನ್ನಿಗನೂರು, ಆಸೀಫ್, ಯೂನೂಸ್, ಸಾಬಣ್ಣ, ಬಸವರಾಜ ಗಸ್ತಿ, ದುರುಗೇಶ, ನೂರ್‌ಬಾಷಾ, ಮಹೆಬೂಬ್, ಆದಿ ಕಾನಿಹಾಳ, ಎಂ.ಪವನಿ, ಅನ್ವರ್‌ಪಾಷಾ, ಉಸ್ಮಾನ್‌ಪಾಷಾ, ಇಮ್ರಾನ್, ಮೋಹಿತ್ ಪಟೇಲ್, ದಸ್ತಗಿರಿಸಾಬ್, ಶೋಯೆಬ್, ಆಲಂಬಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts