More

    36ನೇ ಕಾಲುವೆ ಕೆಳಭಾಗಕ್ಕೆ ನೀರು ಹರಿಸಿ, ರೈತರು ಒತ್ತಾಯ

    ಬೇಡಿಕೆ ಈಡೇರದಿದ್ದರೆ ಕಚೇರಿಗೆ ಮುತ್ತಿಗೆ ಎಚ್ಚರಿಕೆ

    ಸಿಂಧನೂರು: 36ನೇ ಕಾಲುವೆ ಕೆಳಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆ ಕಚೇರಿ ಮುಂದೆ ಶುಕ್ರವಾರ 36ನೇ ಕಾಲುವೆ ಕೆಳಭಾಗದ ರೈತರು ಪ್ರತಿಭಟನೆ ನಡೆಸಿದರು.

    36ನೇ ಕಾಲುವೆ ವ್ಯಾಪ್ತಿಯಲ್ಲಿ 3 ರೀಚ್ ಬರಲಿದ್ದು, ಮೊದಲನೇ ರಿಚ್‌ಗೆ ನೀರು ಹೋಗುತ್ತಿದೆ. ಆದರೆ ಎರಡನೇ ರಿಚ್‌ಗೆ ನೀರು ಬರುತ್ತಿಲ್ಲ. ಇದರಿಂದ ಎರಡನೇ ರಿಚ್ ವ್ಯಾಪ್ತಿಯ ಮಲ್ಕಾಪುರ, ಸಾಸಲಮರಿ, ಸಾಸಲಮರಿ ಕ್ಯಾಂಪ್, ಅಮರಾಪುರ, ವೆಂಕಟೇಶ್ವರ ಕ್ಯಾಂಪ್ ರೈತರಿಗೆ ತೊಂದರೆಯಾಗುತ್ತಿದೆ. ಆದರಿಂದ ಕೂಡಲೇ ರೊಟೇಶನ್ ಮೂಲಕ ನೀರು ಹರಿಸಬೇಕು. ಇಲ್ಲದಿದ್ದರೆ ಜ.8ರಂದು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾ ನಿರತ ರೈತರು ಎಚ್ಚರಿಕೆ ನೀಡಿದರು.


    ಇಲಾಖೆ ಅಧಿಕಾರಿಯೊಬ್ಬರು ಜ.6ರಿಂದ ರುಟೇಶನ್ ಮೂಲಕ ನೀರು ಕಾಲುವೆಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಧರ್ಮನಗೌಡ ಮಲ್ಕಾಪುರ, ಎಚ್.ಎನ್.ಬಡಿಗೇರ್, ಶೇಖರಗೌಡ ಅಮರಾಪುರ, ಸಣ್ಣೆಪ್ಪ ಅಮರಾಪುರ, ಶರಣೆಗೌಡ ಮಲ್ಕಾಪುರ, ಪಿ.ರಂಗಾರಾವ್, ನಾಗೇಶ್ವರರಾವ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts