More

    ಕಷ್ಟಕಾರ್ಪಣ್ಯ ನಿವಾರಿಸುವ ಧನ್ವಂತರಿ ಗುರುರಾಯರು; ಪ್ರವಚನಕಾರ ಗುರುರಾಜದಾಸರ ಬಣ್ಣನೆ ರಾಘವೇಂದ್ರ ಸ್ವಾಮಿ ಮಠದಲ್ಲಿ 428ನೇ ವರ್ಧಂತ್ಯುತ್ಸವ

    ಸಿಂಧನೂರು: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಹೆಸರಾದ ಮಂತ್ರಾಲಯದ ಗುರುರಾಯರು ನಂಬಿದವರಿಗೆ ಸಕಲವನ್ನೂ ಕೊಡುವ ಇಷ್ಟಪ್ರದಾತರು ಎಂದು ಖ್ಯಾತ ಪ್ರವಚನಕಾರ, ಬೆಂಗಳೂರಿನ ಗುರುರಾಜದಾಸರು ಹೇಳಿದರು. ನಗರದ ರಾಯರಮಠದಲ್ಲಿ ನಡೆದ 428ನೇ ವರ್ಧಂತ್ಯುತ್ಸವದ ಸಮಾರೋಪದಲ್ಲಿ ಮಾತನಾಡಿ, ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ ನೆಲೆಸಿ ಸಕಲ ಭಕ್ತರಿಗೂ ಅನುಗ್ರಹಿಸುತ್ತಿದ್ದಾರೆ. ಭಕ್ತಿಯಿಂದ ರಾಘವೇಂದ್ರ ಎಂದು ಸ್ಮರಿಸಿದರೆ ಮುಗ್ಧಮಗುವಿನಂತೆ ಬಂದು ಕಷ್ಟಕಾರ್ಪಣ್ಯ, ರೋಗಾದಿಗಳನ್ನು ನಿವಾರಿಸುವ ಧನ್ವಂತರಿ ಆಗಿದ್ದಾರೆಂದು ಬಣ್ಣಿಸಿದರು.

    ರಾಯರು ರಾಮ, ಕೃಷ್ಣ, ನರಹರಿ, ಹನುಮಂತದೇವರ ಮೂರು ಅವತಾರಗಳ ರೂಪದಲ್ಲಿ ದೇವಾನುದೇವತೆಗಳೊಡನೆ ಬೃಂದಾವನದಲ್ಲಿ ನೆಲೆಸಿದ್ದಾರೆ. ಬೃಂದಾವನದ ದರ್ಶನ ಪಡೆದರೆ ಸಕಲ ತೀರ್ಥಯಾತ್ರೆಗಳನ್ನು ಮಾಡಿದ ಫಲ ಸಿಗುತ್ತದೆ ಎಂದು ರಾಯರ ವಿವಿಧ ಪವಾಡಗಳನ್ನ ವಿವರಿಸಿದರು. ಫೆ.21ರಿಂದ 26ರವರೆಗೆ ಬೆಳಗ್ಗೆ ಶ್ರೀರಾಮ ಮಂದಿರದಲ್ಲಿ ಹರಿದಾಸರು ಕಂಡ ಗುರುರಾಯರು, ರಾಯರಮಠದಲ್ಲಿ ಸಂಜೆ ಭಾಗವತ ಪುರಾಣವನ್ನು ಗುರುರಾಜ ದಾಸರು ಹೇಳಿದರು. ಶ್ರೀಗುರುರಾಯರ ಅಷ್ಟಾಕ್ಷರ ಹೋಮವನ್ನು ಬಳ್ಳಾರಿಯ ಅರ್ಚಕ ವೃಂದದವರು ನೆರವೇರಿಸಿದರು.

    ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆ.ಮಹೇಶ, ಶೋಭನ್‌ಬಾಬು ಭಾಗವಹಿಸಿದ್ದರು. ಸಿಂಧನೂರಿನ ವಿವಿಧ ಭಜನಾ ಮಂಡಳಿಗಳು ಪ್ರತಿದಿನ ಭಜನೆ, ತುರ್ವಿಹಾಳ ವಿಜಯಲಕ್ಷ್ಮೀ ತಂಡದವರಿಂದ ಬೆಳಗಿನಜಾವ ಸುಪ್ರಭಾತ ಜರುಗಿತು. ಬೆಳಗ್ಗೆ ಅಷ್ಟೋತ್ತರ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಶಾಮಾಚಾರ್, ವಿಚಾರಣಕರ್ತ ರಾಘವೇಂದ್ರರಾವ್ ಕುಲಕರ್ಣಿ, ಪ್ರಮುಖರಾದ ಎಂ.ಕೆ.ಗೌರಕರ್, ಮನೋಹರ್‌ರಾವ್ ಕುಲಕರ್ಣಿ, ಮಹೇಶ್ ಸೌದ್ರಿ, ನರಸಿಂಹಾಚಾರ್ ಮಠಾಧಿಕಾರ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts