More

    ವಿವಾದಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಲಿ

    ಸಿದ್ದಾಪುರ: ವಿತಂಡವಾದಕ್ಕೆ ಅವಕಾಶವಿಲ್ಲದಂತೆ ಒಂದೇ ಮನಸ್ಥಿತಿಯವರಲ್ಲಿ ಸಂಭಾಷಣೆ ನಡೆಸಿ, ಸ್ಪಷ್ಟವಾದ ನಿರ್ಧಾರ ಕೈಗೊಳುವುದಕ್ಕೆ ಸಂಭಾಷಾ ಪರಿಷತ್ ಉಪಯೋಗವಾಗಲಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆಕ್ಕಾರ ನಾಗರಾಜ ಭಟ್ಟ ಹೇಳಿದರು.

    ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಸೋಮವಾರ ಸಂಭಾಷಾ ಪರಿಷತ್(ಸಭಾಭವನ) ಉದ್ಘಾಟಿಸಿ ಅವರು ಮಾತನಾಡಿದರು.

    ಸಂಭಾಷಾ ಪರಿಷತ್​ನಲ್ಲಿ ಆರೋಗ್ಯಕರ ಚರ್ಚೆ, ಪರಸ್ಪರ ಜ್ಞಾನ ವಿನಿಮಯ, ವಚನಶಕ್ತಿ ವೃದ್ಧಿ, ಸಂದೇಹ ನಿವಾರಣೆಗೆ ಸಂಭಾಷಾ ಪರಿಷತ್ತು ಅವಕಾಶ ನೀಡಿ ಹೆಸರಿಗೆ ಸಾರ್ಥಕತೆ ತರುವಂತಾಗಬೇಕು ಎಂದು ಹೇಳಿದರು.

    ನವೀಕರಣಗೊಂಡ ಜ್ವರ ಹೊರ ರೋಗಿ ವಿಭಾಗವನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಉದ್ಘಾಟಿಸಿ, ಕರೊನಾ ಭಯದಲ್ಲೇ ಓಡಾಡುತ್ತಿದ್ದೇವೆ. ಕೋವಿಡ್ ಜತೆಯೇ ಬದುಕುವ ವ್ಯವಸ್ಥೆಯನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಅಗತ್ಯ ವೈದ್ಯರು, ವೈದ್ಯಕೀಯ ವ್ಯವಸ್ಥೆಯನ್ನು ಸಮಯೋಚಿತವಾಗಿ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡುತ್ತಿರುವುದು ಸ್ವಾಗತಾರ್ಹ ಎಂದರು.

    ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಸಂಭಾಷಾ ಪರಿಷತ್ ಸಭಾಭವನದಲ್ಲಿ ಸ್ಕಿ›ೕನ್ ವ್ಯವಸ್ಥೆ, ಪ್ರತ್ಯೇಕ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜ್ವರ ಹೊರರೋಗಿ ವಿಭಾಗ ಪ್ರಾರಂಭದ ಜತೆ ಧನ್ವಂತರಿ ಆಸ್ಪತ್ರೆಗೆ ಬರುವ ರೋಗಿಗಳ ಇತರೆ ಅವಶ್ಯಕತೆ ಪೂರೈಸಲಾಗುತ್ತದೆ ಎಂದರು.

    ಸಮಿತಿ ಅಧ್ಯಕ್ಷ ವಿನಾಯಕರಾವ್ ಹೆಗಡೆ ಉಪಸ್ಥಿತರಿದ್ದರು. ಪ್ರಾಚಾರ್ಯು ಡಾ. ರೂಪಾ ಭಟ್ಟ, ಪೊ›.ರಾಘವೇಂದ್ರ ಎಲ್, ಪೊ›. ಶ್ರೀಕಾಂತ ಭಟ್ಟ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts