More

    ಭಗತ್ ಸಿಂಗ್ ಆದರ್ಶ ಅಳವಡಿಸಿಕೊಳ್ಳಿ

    ಸಿಂಧನೂರು: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ರಾಜಿ ರಹಿತ ಹೋರಾಟಗಾರರಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯ ಶಿಖರ ಏರಬೇಕು ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.

    ನಗರದ ಬಸ್ ನಿಲ್ದಾಣದ ಮುಂದೆ ಭಗತ್ ಸಿಂಗ್ ಆಟೋ ಚಾಲಕರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಮತ್ತು ಸಹ ಗೆಳೆಯರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾ. 23 ಪರಕೀಯರಿಂದ ನಲುಗಿದ ದೇಶದ ವಿಮೋಚನೆಗೆ ಭಗತ್ ಸಿಂಗ್ ದಿಟ್ಟ ಹೋರಾಟ ನಡೆಸಿದ್ದರು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರಂಥ ದಿಟ್ಟ ಯುವಕರ ಕೆಚ್ಚೆದೆಯ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ಗೊಡ್ಡು ಬೆದರಿಕೆಗಳಿಗೆ ಹೆದರದೇ, ಯಾವುದೇ ರಾಜಿಗಳಿಗೆ ಒಳಗಾಗದೇ ಬ್ರಿಟಿಷರಿಗೆ ಸಡ್ಡು ಹೊಡೆದ ಭಗತ್ ಸಿಂಗ್ ಮತ್ತವರ ಸ್ನೇಹಿತರ ಧೈರ್ಯ ಯುವಜನತೆಗೆ ಮಾದರಿಯಾಗಿದೆ. ಇಡೀ ದೇಶವನ್ನೇ ಆವರಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಆದರೆ ನೈಜ ಇತಿಹಾಸವನ್ನು ಮರೆಮಾಚಲಾಗಿದೆ.ಎಂದರು.

    ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟದ ಕುಲುಮೆಗೆ ತಳ್ಳಿದೆ. ಇಡೀ ದೇಶದ ಸಂಪತ್ತನ್ನು ಅಂದಾನಿ, ಅಂಬಾನಿಯಂಥ ಕಾರ್ಪೋರೆಟ್ ಉದ್ಯಮ ಶಕ್ತಿಗಳು ಕೊಳ್ಳೆ ಹೊಡೆಯುತ್ತಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ಮಾರಾಟ ಮಾಡಲಾಗುತ್ತಿದೆ ಎಂದರು.ಸಂಘದ ಪ್ರಮುಖರಾದ ಮಹೆಬೂಬ್, ಮುಸ್ತಾಕ್, ಚಾಂದಷಾ, ಬಾಬರ್, ಖಾಜಾಹುಸೇನ್, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts