More

    ಉತ್ತಮ ಜೀವನ ಸಾಗಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ

    ಸಿಂಧನೂರು: ಪಠ್ಯದ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಹೇಳಿದರು.

    ತಾಲೂಕಿನ ವಿರೂಪಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ 2023 ನೇ ಸಾಲಿನ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಶಾಲಾ, ಕಾಲೇಜುಗಳಲ್ಲಿ ಪಠ್ಯ ಬೋಧನೆಯ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದರೆ ಎಲ್ಲ ಕಡೆ ವಿಶ್ವ ಭ್ರಾತೃತ್ವ ಬೆಳೆಯಲಿದೆ. ಉತ್ತಮ ಜೀವನ ಸಾಗಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಲಿದೆ ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಈರಪ್ಪ ಅಯ್ಯಳಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಎಸ್.ಜಿ.ವಿ. ಅಂಬಣ್ಣ ನಾಯಕ ಬೇಸಿಗೆ ಶಿಬಿರದ ಮಹತ್ವ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಹಾಗೂ ಸ್ಕೌಟ್ ಮಾಸ್ಟರ್ ಎಚ್. ಬಸವರಾಜ್, ವಚನ ಸಾಹಿತ್ಯ ಪರಿಷತ್ತ ಮಹಿಳಾ ಘಟಕ ತಾಲೂಕು ಅಧ್ಯಕ್ಷ ಜಿ.ಜೆ.ದೇವಿರಮ್ಮ, ಕಸಾಪ ಕೋಶಾಧ್ಯಕ್ಷ ಬಸೀರ್ ಎತ್ಮಾರಿ, ಕವಿಗಳಾದ ಬಸವರಾಜ ಕುಂಬಾರ, ನಾಗಪ್ಪ ಹೂವಿನಬಾವಿ, ಗುಂಡೂರಾವ್ ಚೆನ್ನಳ್ಳಿ, ಸುರೇಶಗೌಡ, ಸಂಗೀತಾ ಸಾರಂಗಮಠ, ಶಿಕ್ಷಕಿಯರಾದ ಪ್ರಮೀಳಾ ಹಿರೇಮಠ, ಶಾರದಮ್ಮ, ಮಂಜುಳಾ, ಕಾವೇರಿ, ಸುನೀತಾ ಅರಮನಿ, ಗೈಡ್ ಕ್ಯಾಪ್ಟನ್ ಶ್ವೇತಾ ಗೊರವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts