More

    ತುಂಗಭದ್ರಾ ಎಡದಂಡೆ ನಾಲೆಗೆ ಏ.15ರ ವರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಿಎಂಗೆ ಕಾಂಗ್ರೆಸ್‌ನಿಂದ ಮನವಿ

    ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಏ.15 ವರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಒತ್ತಾಯಿಸಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಭಾನುವಾರ ಮನವಿ ಸಲ್ಲಿಸಲಾಯಿತು.

    ಐಸಿಸಿ ಸಭೆಯಲ್ಲಿ ಮಾ.31 ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಹಾಗೆ ಮಾಡಿದರೆ ಈಗಾಗಲೇ ಬೆಳೆದು ನಿಂತ ಭತ್ತಕ್ಕೆ ಸರಿ ಹೊಂದುವದಿಲ್ಲ. ಏ. 15 ವರೆಗೆ ನೀರು ಹರಿದರೆ ಬೆಳೆ ಕೈ ಸೇರುತ್ತದೆ. ಆದ್ದರಿಂದ, 3,500 ಕ್ಯೂಸೆಕ್‌ನಂತೆ ಇನ್ನೂ 25 ದಿನ ನೀರು ಹರಿಸಬೇಕು. ಭದ್ರಾ ಜಲಾಶಯದಿಂದ 5 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಹರಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಅನುದಾನ ಕೋರಿದ ಶಾಸಕ ವೆಂಕಟರಾವ್: ಸಿಂಧನೂರಿನ ಬೈಪಾಸ್ ರಸ್ತೆ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ಬಿಡುಗಡೆ ಮಾಡಲು ಕೋರಿ ಶಾಸಕ ವೆಂಕಟರಾವ ನಾಡಗೌಡ ಸಿಎಂ ಬಿ.ಎಸ್, ಯಡಿಯೂರಪ್ಪಗೆ ಭಾನುವಾರ ಮನವಿ ಸಲ್ಲಿಸಿದರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 11.50 ಕಿ.ಮೀ. ಬೈಪಾಸ್ ಯೋಜನೆ ಗುರುತಿಸಿದ್ದು 211 ಕೋಟಿ ರೂ. ಭೂಸ್ವಾಧೀನಕ್ಕೆ ವೆಚ್ಚದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಲಾಗಿದೆ. ಕೂಡಲೇ ಅನುದಾನ ಮಂಜೂರು ಮಾಡಬೇಕು. ಅಲ್ಲದೇ ತುಂಗಭದ್ರಾ ಎಡದಂಡೆ ನಾಲೆಗೆ ಏ.15 ವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು. ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಇದ್ದರು.

    ಸಮುದಾಯ ಭವನಕ್ಕೆ ಕೊಡಿ ಅನುದಾನ: ರಾಯಚೂರಿನ 17ನೇ ವಾರ್ಡ್‌ನಲ್ಲಿ ಬರುವ ಶ್ರೀ ಚಂದ್ರಮೌಳೇಶ್ವರ ಟ್ರಸ್ಟ್ ಹಾಗೂ ವೀರಶೈವ ಸಮುದಾಯ ಸಂಯುಕ್ತವಾಗಿ ನಿರ್ಮಿಸುತ್ತಿರುವ ಸಮುದಾಯಕ್ಕೆ ಅನುದಾನ ಒದಗಿಸಬೇಕು ಎಂದು ಭಾನುವಾರ ಸಿಎಂ ಬಿ.ಎಸ.್ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ ಜವಳಿ, 12 ಕೋಟಿ ರೂ. ಆಗುತ್ತಿದ್ದು, ಇದಕ್ಕೆ 5 ಕೋಟಿ ರೂ. ಒದಗಿಸಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts