More

    ಭತ್ತಕ್ಕೆ 500 ರೂ. ಪ್ರೋತ್ಸಾಹಧನ ನೀಡಲು ಒತ್ತಾಯಿಸಿ 19 ರಂದು ಪ್ರತಿಭಟನೆ

    ಸಿಂಧನೂರು: ಭತ್ತಕ್ಕೆ 500 ರೂ. ಪ್ರೋತ್ಸಾಹಧನ ನೀಡಬೇಕು. ಖರೀದಿ ಕೇಂದ್ರ ನಿಯಮ ಸಡಿಲಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ನಿಂದ ರೈತರೊಂದಿಗೆ ನ.19 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

    ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭಗೊಂಡಿದ್ದು ತಡವಾಗಿ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಮುಂದಾಗಿದೆ. ಜತೆಗೆ ಖರೀದಿ ಪ್ರಕ್ರಿಯೆಯಲ್ಲೂ ದೋಷವಿದೆ. ರೈತರು ಬೆಳೆದ ಭತ್ತದ ಖರೀದಿಗೆ ಅಗತ್ಯ ಅಂಶಗಳನ್ನು ಸರ್ಕಾರ ಕಡೆಗಣಿಸಿದೆ. ಮೊದಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಎ ಗ್ರೇಡ್ ಭತ್ತ 1,880 ಹಾಗೂ ಬಿ ಗ್ರೇಡ್ ಭತ್ತ 1,868 ರೂ. ಖರೀದಿ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.

    ಸರ್ಕಾರ ಕೇವಲ ಖರೀದಿ ಕೇಂದ್ರ ತೆರೆದು, ನಿಯಮ ಅಳವಡಿಸಿದರೆ ಸಾಲದು. ಖರೀದಿ ಕೇಂದ್ರದ ಕಠಿಣ ನಿಯಮಗಳಿಂದ ಇಲ್ಲಿಯವರೆಗೆ ಖರೀದಿಯಾದ ಉದಾಹರಣೆಗಳಿಲ್ಲ. ರೈತರು ಬೆಳೆದ ಭತ್ತಕ್ಕೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಜತೆಗೆ 500 ರೂ. ವಿಶೇಷ ಪ್ರೋತ್ಸಾಹಧನ ನೀಡುವುದು ಅತ್ಯವಶ್ಯ. ಇದ್ಯಾವುದನ್ನು ಪರಿಗಣಿಸದೆ ಕೇವಲ ರೈತರ ಕಣ್ಣೀರೊರೆಸುವ ತಂತ್ರ ಮಾಡುವುದು ಯಾವ ನ್ಯಾಯ ಎಂದರು.

    ಸರ್ಕಾರದಿಂದ ಸ್ಪಂದನೆ ಸಿಕ್ಕಿದೆ. ಖರೀದಿ ಕೇಂದ್ರ ಆರಂಭಿಸಲಾವುದು ಎಂದು ಶಾಸಕ ವೆಂಕಟರಾವ ನಾಡಗೌಡರು ಮಾಹಿತಿ ನೀಡಿದ್ದಾರೆ. ವಿರೋಧ ಪಕ್ಷದ ಶಾಸಕರಾಗಿ ರೈತರಿಗೆ ನ್ಯಾಯ ಒದಗಿಸುವುದು ಬಿಟ್ಟು, ಸರ್ಕಾರದ ಪರವಾಗಿರುವುದು ಅವರ ರೈತರ ಕಾಳಜಿ ತೋರಿಸುತ್ತದೆ. ಸರ್ಕಾರ ಕೂಡಲೇ ಐಸಿಸಿ ಸಭೆ ಕರೆದು ಎರಡನೇ ಬೆಳೆಗೆ ನೀರು ಹರಿಸುವ ತೀರ್ಮಾನ ಪ್ರಕಟಿಸಬೇಕು. ಕಾರ್ಖಾನೆಗಳಿಗೆ ನೀರು ಪೂರೈಕೆ ನಿಲ್ಲಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.

    ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರಜಹಗೀರ್‌ದಾರ್, ಜಿಪಂ ಸದಸ್ಯ ಬಸವರಾಜ ಹಿರೇಗೌಡ್ರ, ಮುಖಂಡರಾದ ಎಚ್.ಎನ್.ಬಡಿಗೇರ, ಛತ್ರಪ್ಪ ಕುರುಕುಂದಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ ಇದ್ದರು.


    ಬಿಎಸ್ ಯಡಿಯೂರಪ್ಪ ಸರ್ಕಾರ ರೈತರಪರ ಎಂದು ಹಳುತ್ತಿದೆ. ಆದರೆ ರೈತರಿಗೆ ಏನೂ ಮಾಡಿಲ್ಲ. ರೈತರ ಸರ್ಕಾರವಾಗಿದ್ದರೆ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಲಿ. ಉಂಡೆ ಕೊಬ್ಬರಿಗೆ ಮಾತ್ರ 1 ಸಾವಿರ ರೂ. ಪ್ರೋತ್ಸಾಹಧನ ನೀಡುವ ಮೂಲಕ ರೈತರಿಗೆ ತಾರತಮ್ಯ ಎಸಗಿದ್ದಾರೆ.
    | ಹಂಪನಗೌಡ ಬಾದರ್ಲಿ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts