More

    ಭಕ್ತರಿಂದಲೇ ಮಠಗಳ ಅಭಿವೃದ್ಧಿ; ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅಭಿಮತ

    ಸಂಸ್ಕೃತಿ ಭವನಕ್ಕೆ ಭೂಮಿಪೂಜೆ

    ಸಿಂಧನೂರು: ಭಕ್ತರಿಂದ ಮಾತ್ರ ಶ್ರೀಮಠದ ಅಭಿವೃದ್ಧಿ ಸಾಧ್ಯವಿದ್ದು, ಮಠಗಳು ಅಭಿವೃದ್ಧಿಗೊಳ್ಳಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ವ್ಯಾಖ್ಯಾನ ಮಾಡಿದರು.

    ನಗರದ ಮೂರ್‌ಮೈಲ್‌ಕ್ಯಾಂಪ್ ಬಾಳೆಹೊನ್ನೂರು ಖಾಸಾ ಶಾಖಾಮಠದಲ್ಲಿ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ 22 ಲಕ್ಷ ರೂ. ವೆಚ್ಚದ ಸಂಸ್ಕೃತಿ ಭವನಕ್ಕೆ ಭಾನುವಾರ ಸಂಜೆ ಭೂಮಿಪೂಜೆ ನೆರವೇರಿಸಿ, ಆಶೀರ್ವಚನ ನೀಡಿದರು. ರಂಭಾಪುರಿ ಪೀಠ ಸಿಂಧನೂರಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದೆ.

    ಸೋಮನಾಥ ಶಿವಾಚಾರ್ಯರು ಸಹ ಇಲ್ಲಿನ ಜನರ ಬಗ್ಗೆ ಪ್ರೀತಿ, ವಿಶ್ವಾಸ, ಗೌರವವನ್ನು ಹೊಂದಿದ್ದಾರೆ. ಪಾದರಸದಂತೆ ಕಾರ್ಯನಿರ್ವಹಿಸುತ್ತ ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ. ಸಂಘಟನಾತ್ಮಕ ಶಕ್ತಿಯಿಂದ ಎಲ್ಲರೂ ಕೆಲಸ ಮಾಡಿ. ಸೋಮನಾಥ ಶ್ರೀಗಳ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಕ್ರಿಯಾತ್ಮಕ ಯೋಜನೆಗಳನ್ನು ಸಾಕಾರಗೊಳಿಸಬೇಕು. ರಂಭಾಪುರಿ ಪೀಠದಿಂದ ಇಲ್ಲಿನ ಅಭಿವೃದ್ಧಿಗೆ ಐದು ಲಕ್ಷ ರೂ.ದೇಣಿಗೆ ನೀಡಲಾಗುವುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಖಾಸಾಶಾಖಾಮಠ ಸೋಮನಾಥ ಶಿವಾಚಾರ್ಯ ಮಾತನಾಡಿ, ಈ ಭಾಗದಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ, ಕೋವಿಡ್ ಸಂಕಷ್ಟ ದೂರವಾಗಿ ಎಲ್ಲ ವರ್ಗದ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

    ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಈಗಾಗಲೇ ಮಠದ ಅಭಿವೃದ್ಧಿಗಾಗಿ 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದು, ತಾಂತ್ರಿಕ ದೋಷಗಳಿಂದ ಕಾಮಗಾರಿ ವಿಳಂಬವಾಗಿದೆ. ಯಾತ್ರಿ ನಿವಾಸವೆಂದು ಬದಲಾಯಿಸಿ, ಸರ್ಕಾರದಿಂದ ಅನುಮೋದನೆ ಮಾಡಿಸುವ ಕೆಲಸ ಬಾಕಿ ಇದೆ. ಅದನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು ಎಂದರು.

    ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕರಾದ ವೀರೇಶ ಇಲ್ಲೂರು, ಲೀಲಾ ಮಲ್ಲಿಕಾರ್ಜುನ ಕಾರಟಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಜಿಪಂ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡರ, ಅಮರೇಗೌಡ ವಿರುಪಾಪುರ, ವೀರಶೈವ ಸಮುದಾಯದ ಮುಖಂಡರಾದ ಎನ್.ಅಮರೇಶ, ಅಶೋಕ ಗದ್ರಟಗಿ, ಶಿವುಕುಮಾರ ಜವಳಿ, ಸೋಮನಗೌಡ ಬಾದರ್ಲಿ, ಅಮರೇಶ ಮಾಡಸಿರವಾರ, ಶಿವರಾಜ್ ಪಾಟೀಲ್ ಗುಂಜಳ್ಳಿ, ಸುಮಿತ್ ತಡಕಲ್, ಅಮರಯ್ಯಸ್ವಾಮಿ ಅಲಬನೂರು, ಶಂಕರಗೌಡ ಎಲೆಕೂಡ್ಲ್ಲಿಗಿ, ಮಲ್ಲಿಕಾರ್ಜುನ ಜೀನೂರು, ಹನುಮೇಶ, ಸೈಯದ್ ಆಸಿಫ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts