More

    ಯೋಗ ಸರ್ವ ರೋಗಕ್ಕೆ ಮದ್ದು; ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಅನಿಸಿಕೆ

    ಉಚಿತ ಯೋಗ ತರಬೇತಿ ಶಿಬಿರ

    ಸಿಂಧನೂರು: ಯೋಗ ಸರ್ವ ರೋಗಕ್ಕೆ ಮದ್ದಾಗಿದ್ದು, ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಸಲಹೆ ನೀಡಿದರು.

    ನಗರದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯೋಗ ಕುಟೀರ್‌ದಿಂದ ನ್ಯಾಷನಲ್ ಪದವಿಪೂರ್ವ, ಪದವಿ ಕಾಲೇಜ್ ಹಾಗೂ ಆದಿತ್ಯ ಪದವಿಪೂರ್ವ ಹಾಗೂ ಪದವಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಒತ್ತಡದ ಜೀವನದಿಂದ ನಾನಾ ರೋಗಗಳು ಆವರಿಸಿವೆ. ಇವುಗಳಿಗೆ ಔಷಧಿ ತೆಗೆದುಕೊಳ್ಳುವುಕ್ಕಿಂತ ಯೋಗವನ್ನು ಜೀವನ ಶೈಲಿಯಾಗಿ ಬದಲಾಯಿಸಿಕೊಳ್ಳಬೇಕು. 15 ವರ್ಷಗಳಿಂದ ತಾಲೂಕಿನ ಜನಕ್ಕೆ ಯೋಗ ಹೇಳಿಕೊಡುತ್ತಿರುವ ಯೋಗ ಗುರು ಎಂ.ಭಾಸ್ಕರ್ ಅವರ ಕಾರ್ಯ ಮೆಚ್ಚುವಂಥದ್ದು ಎಂದರು. ಯೋಗಗುರು ಎಂ.ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ನಿತ್ಯದ ಜೀವನದಲ್ಲಿ ಸರಳ ಯೋಗ ರೂಢಿಸಿಕೊಳ್ಳಬೇಕು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಜ್ಞಾನವೃದ್ಧಿಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.

    ಆದಿತ್ಯ ಕಾಲೇಜ್ ಪ್ರಾಚಾರ್ಯ ಕೆ.ಚಕ್ರವರ್ತಿ, ವಿಸಿಬಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಪತ್ರಕರ್ತ ಚಂದ್ರಶೇಖರ ಯರದಿಹಾಳ, ಉಪನ್ಯಾಸಕರಾದ ಶರಣಬಸವ ಹಟ್ಟಿ, ಡಾ.ಬಸವರಾಜ ನಾಯಕ, ರತ್ನಾವತಿ, ರವಿಕುಮಾರ ಮಸ್ಕಿ ಇತರರು ಇದ್ದರು. ಬೀರಪ್ಪ ಶಂಭೋಜಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts