More

    ನರೇಗಾ ಕೂಲಿ ಕೆಲಸ ನ್ನೂ 50 ದಿನ ಹೆಚ್ಚಿಸಲು ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಜಾರಿ ಸಮಿತಿ ಆಗ್ರಹ


    ಸಿಂಧನೂರು: ಉದ್ಯೋಗಖಾತ್ರಿ ಯೋಜನೆಯಡಿ 100 ದಿನಗಳ ಜತೆಯಲ್ಲಿ 50 ದಿನ ಹೆಚ್ಚುವರಿಯಾಗಿ ಕೆಲಸಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಜಾರಿ ಸಮಿತಿ ಸಾಲಗುಂದಾ ಘಟಕ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿತು.

    ಎರಡು ಬಾರಿ ಕೋವಿಡ್-19ನಿಂದ ಲಾಕ್‌ಡೌನ್ ಪರಿಣಾಮವಾಗಿ ಗ್ರಾಮೀಣ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಹುತೇಕ ಕಾರ್ಮಿಕರು ಲಾಕ್‌ಡೌನ್ ಬಳಿಕ ನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ನಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಸರ್ಕಾರಿ 100 ದಿನದ ಜತೆಗೆ ಹೆಚ್ಚುವರಿಗಾಗಿ 50 ದಿನ ಉದ್ಯೋಗಖಾತ್ರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಸಾದಪ್ಪ, ಅಳ್ಳಪ್ಪ, ಮಹ್ಮದ್, ಸಜೀವಪ್ಪ ಮಡ್ಯಾಳ್, ಚಿದಾನಂದ, ಸರ್ವರ್‌ಸಾಬ, ಬಂಡಾರೆಪ್ಪ, ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts