More

    ಸಿಂಧನೂರಲ್ಲಿ 800 ವೃಕ್ಷ ಗಣಪ ತಯಾರಿಕೆಗೆ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ, ವನಸಿರಿ ಫೌಂಡೇಶನ್ ಕಾಳಜಿಗೆ ಮೆಚ್ಚುಗೆ

    ಸಿಂಧನೂರು: ಕರೊನಾ ಹಿನ್ನೆಲೆಯಲ್ಲಿ ಗಣೇಶ ಉತ್ಸವ ಸರಳವಾಗಿ ಆಚರಿಸಿ, ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸುವಂತೆ ಮೂರುಮೈಲ್‌ಕ್ಯಾಂಪ್‌ನ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದಲ್ಲಿ ಬುಧವಾರ ವನಸಿರಿ ಫೌಂಡೇಶನ್‌ನಿಂದ 800 ವೃಕ್ಷ ಗಣಪ ತಯಾರಿಕೆಗೆ ಚಾಲನೆ ನೀಡಿ ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿ ತೊಲಗಬೇಕು. ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರ ಹಾಳಾಗಲಿದ್ದು ವೃಕ್ಷ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ವನಸಿರಿ ಫೌಂಡೇಶನ್ ಕಾಳಜಿ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.

    ಜಿಲ್ಲಾಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ, ಮನೆಯಲ್ಲೇ ವೃಕ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವುದು ಉತ್ತಮ. ದಾಕ್ಷಾಯಿಣಿ ಗೋಮರ್ಸಿ, ಭಾರತಿ ತಿವಾರಿ, ಮಹಾಂತೇಶ ರೌಡಕುಂದ, ಶಾಂತಮ್ಮ ಮಹೇಶ, ಮಲ್ಲಮ್ಮ ಉಟಕನೂರು, ಸುಜಾತ ಶ್ರೀನಿವಾಸ, ಸಂಗೀತ ಸಾರಂಗಮಠ, ಶಾರದಾ ವಟಗಲ್, ವಿಜಯಲಕ್ಷ್ಮಿ ಸಾಸಲಮರಿ, ಬೂದೇಶ ಮರಾಠಿ, ವೀರಬಾಬು, ಮಹಾಂತೇಶ ಉಪ್ಪಾರ, ಹರ್ಷದ್, ಪ್ರಸಾದ, ದುರ್ಗೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts