More

    ಕೆಲವು ತಿದ್ದುಪಡಿ ತಂದು ಸಮಸ್ಯೆ ಪರಿಹರಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಒತ್ತಾಯ

    ಸಿಂಧನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.

    ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನೆ ರ‌್ಯಾಲಿ ನಗರದ ಕಾರ್ಮಿಕ ಇಲಾಖೆವರೆಗೆ ನಡೆಯಿತು. ಕೋವಿಡ್‌ದಿಂದ ಮೃತಪಟ್ಟ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಲು ಹಾಗೂ ಗುಣಮುಖರಾದ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ನೀಡಬೇಕು. ಮದುವೆ ಸಹಾಯಧನ ನೀಡುವಲ್ಲಿ ವಿಳಂಬ ಮಾಡದೆ, ಕೂಡಲೇ ನೀಡಬೇಕು. ಶೈಕ್ಷಣಿಕ ಸಹಾಯಧನದ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಕೆಲವು ತಿದ್ದುಪಡಿ ತಂದು ಸಮಸ್ಯೆ ಪರಿಹರಿಸಬೇಕು. ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕರಿಗೆ ಪ್ರಾತಿನಿಧ್ಯ ಸಿಗಬೇಕು. ಅರ್ಜಿಗಳ ವಿಳಂಬ ವಿಲೇವಾರಿ ನಿಲ್ಲಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಬೋಗಸ್ ಕಾರ್ಡ್‌ಗಳಿಗೆ ನಿಯಂತ್ರಣ ಹಾಕಬೇಕೆನ್ನುವ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ನಿರತರು ಒತ್ತಾಯಿಸಿದರು.

    ಸಮಿತಿಯ ಪದಾಧಿಕಾರಿಗಳಾದ ಮಾರುತಿ, ಚಂದ್ರಶೇಖರ, ಗೋವಿಂದರಾಜ, ಪಿ.ರಾಮಕೃಷ್ಣ, ಇಸ್ಮಾಯಿಲ್ ದಿದ್ದಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts